ಕಲಿಯುವ ಮನಸ್ಸಿದ್ದರೆ ಯಾವ ಭಾಷೆ ಯಾದರೇನು? | ಲೇಖನ
“ಕನ್ನಡವೇ ಸತ್ಯ ಕನ್ನಡವೇ ನಿತ್ಯ”ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡಿಗನಾಗಿರು. ಎಂದ ತಕ್ಷಣ ನಮ್ಮ ಕರ್ನಾಟಕದ ಬೆಂಗಳೂರು ನೆನಪಾಗುತ್ತದೆ. ಏಕೆಂದರೆ ಜಾತಿ ,ಮತ ,ಭೇದ, ಭಾವ ಇಲ್ಲದೆ ದೇಶದ ವಿವಿಧ ಭಾಗದಿಂದ ಉದ್ಯೋಗವನ್ನು ಹುಡುಕಿಕೊಂಡು ಬರುವ ಪ್ರತಿಯೊಬ್ಬರಿಗೂ ಆಸರೆ ನಮ್ಮ ಕರ್ನಾಟಕ.
ಕರ್ನಾಟಕದಲ್ಲಿರುವ ಪುಟ್ಟ ಜಿಲ್ಲೆಕೊಡಗು .ದಕ್ಷಿಣ ಭಾರತದ ಕಾಶ್ಮೀರವೆಂಬ ಬಣ್ಣಿಸಲ್ಪಡುವ ನಮ್ಮ ಸುಂದರ ನಾಡು ಕೊಡಗು, ಬೆಟ್ಟಗುಡ್ಡಗಳಿಂದ ಕೂಡಿದ ಹಸಿರು ಕಾನನದಿಂದ ಕೂಡಿರುವ ಕಾವೇರಿ ನದಿಯ ಉಗಮ ಸ್ಥಾನದ ಬಗ್ಗೆ ಏನೆಂದು ಬಣ್ಣಿಸಲಿ ಕೊಡಗು ಎಂದರೆ ಪ್ರಕೃತಿ ,ಆಹ್ಲಾದಕರ, ಮುದ ನೀಡುವ ವಾತಾವರಣ ,ಅತಿಥಿಗಳನ್ನು ಸ್ವಾಗತಕೋರುವ ದಿವ್ಯ ಪರಂಪರೆಯನ್ನು ಹೊಂದಿರುವ ಕೊಡಗಿನ ಬಗ್ಗೆ ಏನೆಂದು ಹೊಗಳಲಿ..
ಅಂತಹ ಜಿಲ್ಲೆಯಾದ ಕೊಡಗಿಗೆ ನೆರೆ ಜಿಲ್ಲೆ ,ನೆರೆ ರಾಜ್ಯಗಳಿಂದ ಕೆಲಸ ಹುಡುಕಿಕೊಂಡು ಬರುವ ನೂರಾರು ಮಂದಿ ಅದರಲ್ಲೂ ಕೆಲವು ರಾಜ್ಯದವರಿಗೆ ಮಿನಿ ದುಬೈ ಯಾಗಿದೆ ನಮ್ಮ ಕೊಡಗು.
ಹಾಗೆಯೇ ಬಂದು ನೆಲೆಸಿರುವ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಭೀಮ ಸಿಎಸ್ ಭೂಮಿಕ ಸಿಎಸ್ ಇವರ ಬಗ್ಗೆ ಒಂದು ಕಿರು ಪರಿಚಯ ಮಾಡಲು ಬಯಸುತ್ತೇನೆ .
ಶಿಕ್ಷಕ ವೃತ್ತಿ ಎಂಬುದು ಪವಿತ್ರವಾದ ಹುದ್ದೆ ನಾನು ಹುದ್ದೆಗೆ ಸೇರಿದ ಮೇಲೆ ನೂರಾರು ವಿದ್ಯಾರ್ಥಿಗಳನ್ನು ನೋಡಿದ್ದೇನೆ ಇಷ್ಟಪಟ್ಟಿದ್ದೇನೆ ಅದರಲ್ಲೂ ನನ್ನ 25 ವರ್ಷದ ಈ ಪವಿತ್ರ ಶಿಕ್ಷಕ ವೃತ್ತಿಯಲ್ಲಿ ನನ್ನ ಜೀವನದಲ್ಲಿ ನನಗೆ ದೊರೆತಿರುವ ಸುಂದರ ಪ್ರೀತಿಯ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯಿದೆ. ಇಬ್ಬರು ವಿದ್ಯಾರ್ಥಿಗಳು ಕರಡಿಗೋಡು ಗ್ರಾಮದ ಟೀಕ್ ವುಡ್ ನಿವೃತ್ತ ಹೇರ್ ಕಾ ಮಾಡೋರ್(Air commodore) ಶ್ರೀಮಾನ್ ದೇವಯ್ಯ ಸಾರ್ ಅವರ ತೋಟದಲ್ಲಿ ವಾಸವಿದ್ದು ಅವರು ಕೂಡ ಈ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರದಲ್ಲಿ ಸದಾ ಪ್ರೋತ್ಸಾಹ ನೀಡುತ್ತಿರುವುದು ಕೂಡ ಸಂತಸದ ವಿಚಾರವಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಡಿಗೋಡು ವಿನಲ್ಲಿ ಭೀಮಸಿ ಎಸ್ 4ನೇ ತರಗತಿ ಭೂಮಿಕ ಸಿಎಸ್ ಮೂರನೇ ತರಗತಿಗೆ ನಮ್ಮ ಶಾಲೆಗೆ ದಾಖಲಾಗಿದ್ದರು .ಇವರು ಮೂಲತಹ ತಂದೆ ಸೋಮು ಕುಮಾರ್ ನೇಪಾಳದ ಹಿನ್ನೆಲೆಯವರು ಅವರ ಪೋಷಕರು ಭಾರತಕ್ಕೆ ವಲಸೆ ಬಂದಿರುತ್ತಾರೆ .ಡಾರ್ಜೆಲಿಂಗ್ ಬಳಿ ನೆಲೆಸಿದ್ದಾರೆ .ತಾಯಿ ಮಾಯಾದೇವಿ ಡಾರ್ಜಿಲಿಂಗ್ ನವರು. ನಿಜಕ್ಕೂ ಈ ಇಬ್ಬರು ವಿದ್ಯಾರ್ಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದಾರೆ ಯಾವುದೇ ಶಾಲೆಗೆ ದಾಖಲಾದರು ಕೂಡ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮು ದರಲ್ಲಿ ಯಾವುದೇ ಸಂಶಯವಿಲ್ಲ.
ನಮ್ಮ ಶಾಲೆಯಲ್ಲಿ ಓದುತ್ತಿರುವಾಗ ಆಟ-ಪಾಠ ಯೋಗ ಹಾಡು ನೃತ್ಯ ಹೀಗೆ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ನಮ್ಮ ಶಾಲೆಗೆ ಕೀರ್ತಿ ತಂದ ನನ್ನ ಅಚ್ಚುಮೆಚ್ಚಿನ ಉತ್ತಮ ವಿದ್ಯಾರ್ಥಿಗಳಾಗಿದ್ದಾರೆ. ಉತ್ತಮ ನಾಯಕತ್ವ ಗುಣ, ಶಿಸ್ತು ,ವಿದೇಯತೆ, ಮಮತೆ, ಪ್ರೀತಿ ನೋಡಿ ನನ್ನ ವಿದ್ಯಾರ್ಥಿಗಳಬಗ್ಗೆ ಹೆಮ್ಮೆಯೆನಿಸುತ್ತದೆ. 2021- 22ನೇ ಶೈಕ್ಷಣಿಕ ಸಾಲಿನಲ್ಲಿ ಭೀಮ ಸಿ ಎಸ್ ಬಿಜಿಎಸ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಮೊದಲ ಅಂಕ ಗಳಿಸಿ ಉತ್ತೀರ್ಣರಾಗಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆ ನಮ್ಮ ಶಾಲೆಗೂ ಬಿ ಜಿ ಎಸ್ ಶಾಲೆಗೂ ಹೆಸರು ತಂದಿದ್ದಾಳೆ.
ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಕೆಲವರಿಗೆ ಕನ್ನಡ ಕಷ್ಟ ಕನ್ನಡ ಗೊತ್ತಿದ್ದರೂ ,ಇಂಗ್ಲೀಷ್ ವ್ಯಾಮೋಹ ಇಂತಹ ಜನರ ನಡುವೆ ಈ ವಿದ್ಯಾರ್ಥಿಗಳು ಒಳ್ಳೆಯ ಉದಾಹರಣೆ ಯಾಗಿದ್ದಾರೆ. ಸ್ಪಷ್ಟ ವಾಗಿ, ಶುದ್ಧವಾಗಿ ,ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುತ್ತಾರೆ. ಹಾಗೆಯೇ ಹಾಗೆಯೇ ಭೂಮಿಕಾ ಎಂಬ ವಿದ್ಯಾರ್ಥಿನಿ ಈ ವರ್ಷ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇವಳು ಕೂಡ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿ ವಿರಾಜಪೇಟೆ ಸಂತನಮ್ಮ ಶಾಲೆಯಲ್ಲಿ ಭೀಮ ವಿಜ್ಞಾನ ವಿಭಾಗದಲ್ಲೂ ಭೂಮಿಕಾ ವಾಣಿಜ್ಯ ವಿಭಾಗದಲ್ಲೂ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ ಭಗವಂತ ಇಬ್ಬರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಗೊಳಿ ಸಲಿ ಎಂದು ಪ್ರಾರ್ಥಿಸುತ್ತೇನೆ.
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅಮ್ಮ ನೇ ಮೂಲ ಕಾರಣ ನಮ್ಮ ಭಾರತೀಯ ಸಮಾಜವು ಮಾತೃದೇವೋಭವ, ಪಿತೃದೇವೋಭವ ,ಆಚಾರ್ಯ ದೇವೋಭವ ಎಂದು ತಾಯಿಗೆ ಮೊದಲ ಆದ್ಯತೆ ನೀಡಿದೆ ಅಮ್ಮ ಎಂಬ ಎರಡಕ್ಷರದಲ್ಲಿ ಇಂತಹ ಅದ್ಭುತ ಶಕ್ತಿ ಅಡಗಿದೆ. ಯಾಕೆ ಹೀಗೆ ಹೇಳುತ್ತಿದ್ದೇನೆಂದು ಓದುಗರಿಗೆ ಆಶ್ಚರ್ಯವಾಗಬಹುದು ನನ್ನ ವೃತ್ತಿ ಜೀವನದ ಅತ್ಯುತ್ತಮ ಪುರಸ್ಕಾರ ಎಂದು ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಈ ಇಬ್ಬರು ವಿದ್ಯಾರ್ಥಿನಿಯರು ಮಿಸ್ ನಿಮ್ಮನ್ನು “ಅಮ್ಮ “ಎಂದು ಕರೆಯಲೆ ಎಂದು ಹೇಳಿದಾಗ ನಾನು ಒಂದು ನಿಮಿಷ ಚಕಿತಳಾದೆ ಮೂಕ ವಿಸ್ಮಿತಳಾದೆ ಇದೇ ಅಲ್ಲವೆ ನಿಜವಾದ ಶಿಕ್ಷಕ ಪುರಸ್ಕಾರ ಇದಕ್ಕಿಂತ ಬೇರೆ ಏನು ಬೇಕು? ನನ್ನ ವೃತ್ತಿ ಜೀವನ ಸಾರ್ಥಕವಾಯಿತು.
ಹಾಗೆಯೇ ಮತ್ತೊಂದು ವಿಚಾರ ನಿಮಗೆಲ್ಲಾ ತಿಳಿಸಲೇಬೇಕು ಇತ್ತೀಚಿನ ದಿನಗಳಲ್ಲಿ ಕೆಲವು ಪೋಷಕರು ವಿಚಿತ್ರವಾದ ಅಂದರೆ ಅರ್ಥವೇ ಇಲ್ಲದ ಹೆಸರಿಡುತ್ತಾರೆ ಇನ್ನು ಕೆಲವರು ಸೊಗಸಾದ ಹೆಸರಿಡುತ್ತಾರೆ ನಮ್ಮ ಶಾಲೆಗೆ ಡಾರ್ಜಲಿಂಗ್ ಮೂಲದ ಒಬ್ಬ ವಿದ್ಯಾರ್ಥಿನಿ ಒಂದನೇ ತರಗತಿಗೆ ದಾಖಲಾಗಿರು ತಾಳೆ ಹೆಸರು ಕೇಳಿ ನನಗೂ ಆಶ್ಚರ್ಯವಾಯಿತು ಮಗುವಿನ ಹೆಸರು ಕಾವೇರಿ ನಾನು ಕೇಳಿದೆ ಯಾಕೆ ಕಾವೇರಿ ಎಂದು ನಾಮಕರಣ ಮಾಡಿ ದಿರಿ ಆ ದಂಪತಿಗಳು ಹೇಳಿ ದರು, ನನ್ನ ಮಗಳು ಕೊಡಗಿನಲ್ಲಿ ಜನಿಸಿರುವ ಕಾರಣ ನಾವು ಕಾವೇರಿ ಎಂದು ಹೆಸರಿಟ್ಟೆವು ಎಂದು ಹೇಳಿದರು.
ನಿಜಕ್ಕೂ ಹೆಮ್ಮೆಯೆನಿಸಿತು ಕಾವೇರಿ ಮಾತೆ ಎಲ್ಲರನ್ನು ಆಶೀರ್ವದಿಸಲಿ ಎಂದು ಬೇಡಿ ಕೊಳ್ಳುತ್ತಿದ್ದೇನೆ. ಯಾಕೆ ಹೇಳುತ್ತಿದ್ದೇನೆ ಅಂದರೆ ಎಲ್ಲೋ ಹುಟ್ಟಿ ಎಲ್ಲೋಬೆಳೆದು ಇಲ್ಲಿ ಶಿಕ್ಷಣ ವನ್ನು ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ಕಲಿಯುವ ಛಲ ಇದ್ದಾಗ ಯಾವ ರಾಜ್ಯ, ದೇಶ ವಾದರೇನು ?ಯಾವ ಭಾಷೆ ಯಾದರೇನು ?ಅಲ್ಲವೇ…
🖋 ರುಕ್ಮಿಣಿ ಕೆ. ಎಲ್
ಶಿಕ್ಷಕಿ
ಸರಕಾರಿ ಹಿ. ಪ್ರಾ. ಶಾಲೆ ಕರಡಿಗೂಡು