ಕರಾವಳಿಕ್ರೈಂ

ಬಡಗನ್ನೂರು: ಬಾವಿಗೆ ಹಾರಿ ಯುವಕ ಆತ್ಮಹತ್ಯೆಪುತ್ತೂರು: ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಪರಿವಾರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗನ್ನೂರು ಪಟ್ಟೆ ಸಮೀಪದ ನಿವಾಸಿ ಪ್ರೀತಂ (26. ವ) ಆತ್ಮಹತ್ಯೆ ಮಾಡಿಕೊಂಡವರು. ಪರಿವಾರ ಕ್ರೆ ಕೋ ಓಪರೇಟಿವ್ ಸೊಸೈಟಿಯಲ್ಲಿ ದ್ವಿ. ದರ್ಜೆ ಸಹಾಯಕರಾದ ಪ್ರೀತಮ್ ಎನ್ ರವರು ಕಳೆದ 5 ವರ್ಷಗಳಿಂದ ಕೆಲಸನಿರ್ವಹಿಸುತ್ತಿದ್ದು ಪ್ರಸಕ್ತ ಸುಳ್ಯದ ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಮ್ ಅವರು ಡಿ.2ರಂದು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಿದ್ದರು. ಮನೆಯಲ್ಲಿ ಎಲ್ಲರೂ ಊಟ ಮಾಡಿ ರಾತ್ರಿ ಮಲಗಿದ್ದರು. ತಾಯಿ ಹತ್ತಿರ ನಾಳೆ ಮೂಡಬಿದರೆಯಲ್ಲಿ ತರಬೇತಿ ಇದೆ. ಬೇಗ ಎಬ್ಬಿಸಿ ಎಂದು ತಿಳಿಸಿದ್ದರು. ಬಳಿಕ ಪ್ರೀತಮ್ ಅವರ ಕೋಣೆಯಲ್ಲಿ ಮಲಗಿದ್ದರು.

ಡಿ.3ರಂದು ತಾಯಿ ಪ್ರೀತಂ ಅವರನ್ನು ಎಬ್ಬಿಸಲು ಆತನ ಕೋಣೆಗೆ ಹೋದಾಗ ಅಲ್ಲಿ ಅವರು ಇರಲಿಲ್ಲ. ಮನೆಯ ಸುತ್ತಮುತ್ತ ಹುಡಿಕಾಡಿ ನಂತರ ಮನೆಯ ಅಂಗಳದ ಬಾವಿಗೆ ಹೋಗಿ ನೋಡಿದಾಗ ಪಕ್ಕದಲ್ಲಿ ಚಪ್ಪಲಿ ಮತ್ತು ಮೊಬೈಲ್ ಕಂಡಿತ್ತು. ಬಾವಿಯಲ್ಲಿ ನೋಡಿದಾಗ ಏನೂ ಕಂಡಿರಲಿಲ್ಲ. ನೆರೆ ಮನೆಯವರನ್ನು ಕರೆದು ಅಗ್ನಿಶಾಮಕದವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಬಂದು ಬಾವಿಗಿಳಿದು ನೋಡಿದ್ದು ಪ್ರೀತಂ ಮೃತದೇಹ ದೊರೆತಿದೆ. ಪ್ರೀತಂ ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ತಂದೆ ತಾಯಿ ತಮ್ಮನನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

error: Content is protected !!