ಕರಾವಳಿ

ಸುಳ್ಯದಲ್ಲಿ ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಉದ್ಘಾಟನೆಗೆ ಕ್ಷಣಗಣನೆ: ಮೂರು ದಿನಗಳ ಕಬಡ್ಡಿ ಹಬ್ಬಕ್ಕೆ ಸಜ್ಜುಗೊಂಡ ಕ್ರೀಡಾಂಗಣಸುಳ್ಯದಲ್ಲಿ ನಡೆಯಲಿರುವ ಮೂರು ದಿನದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ಉತ್ಸವಕ್ಕೆ ಒಳ ಕ್ರೀಡಾಂಗಣದ ಸಿದ್ಧತೆಗೊಂಡು ಕಬಡ್ಡಿ ಹಬ್ಬಕ್ಕೆ ಸುಳ್ಯ ಕ್ರೀಡಾಂಗಣ ಸಜ್ಜುಗೊಂಡಿದೆ.

ಇಂಡೋರ್ ಸ್ಟೇಡಿಯಂ, ಹೊರಾಂಗಣದ ಝಗ ಮಗಿಸುವ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದ್ದು ಅದ್ದೂರಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಯೋಜನೆ ಹಾಗೂ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ
ನ.17,18,19 ರಂದು ಮೂರು ದಿನಗಳು ಬಹಳ ಅದ್ದೂರಿಯ ಕಬಡ್ಡಿ ಪಂದ್ಯಾಟ 16 ತಂಡಗಳ ಭಾಗವಹಿಸುವಿಕೆಯಲ್ಲಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ರಾಷ್ಟ್ರ ಮಟ್ಟದ ತಂಡಗಳು ಪಂದ್ಯಾಟದಲ್ಲಿ ಸೆಣಸಾಟ ನಡೆಸಲಿರುವುದು.

ಇಂದು ಸಂಜೆ ಈ ಕಬ್ಬಡಿ ಹಬ್ಬದ ಅಂಗವಾಗಿ ಸುಳ್ಯ ಖಾಸಗಿ ಬಸ್ ನಿಲ್ದಾಣದಿಂದ ಆಕರ್ಷಕ ಮೆರವಣಿಗೆ ಸಾಗಿ ಬಂದು ಕಬ್ಬಡಿ ಪಂದ್ಯಾಟದ ಕ್ರೀಡಾಂಗಣಕ್ಕೆ ಪ್ರವೇಶಿಸಿದೆ. 5,000ಕ್ಕೂ ಹೆಚ್ಚು ಪ್ರೇಕ್ಷಕರು ಏಕಕಾಲದಲ್ಲಿ ಈ ಕಬ್ಬಡಿ ಪಂದ್ಯಾಟವನ್ನು ವೀಕ್ಷಿಸಲು ಸಂಘಟಕರು ಸುಸಜ್ಜಿತ ವ್ಯವಸ್ಥೆಯನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!