ಮನೆಯೊಳಗೆ ಬಂದ ಹಾವು ಓಡಿಸಲು ಯತ್ನ; ಮನೆ ಭಸ್ಮ
ಮನೆಯೊಳಗೆ ಬಂದ ಹಾವೊಂದನ್ನು ಹೊರಗೆ ಓಡಿಸಲು ಮನೆಮಂದಿ ಮಾಡಿದ ತಂತ್ರಗಾರಿಕೆಯೊಂದು ಇಡೀ ಮನೆಯನ್ನೇ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ಬಂದಾ ನಗರದಲ್ಲಿ ವರದಿಯಾಗಿದೆ.
ನಗರದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಮನೆಯೊಳಗೆ ಹಾವೊಂದು ಸೇರಿಕೊಂಡಿದ್ದು ಅದನ್ನು ನೋಡಿದ ಮನೆಮಂದಿ ಹಾವನ್ನು ಓಡಿಸಲು ವಿವಿಧ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗಿಂದ ಹೊರ ಹಾಕಲು ಮಾತ್ರ ಸಾಧ್ಯವಾಗಲಿಲ್ಲ, ಇದರಿಂದ ಬೇಸತ್ತ ಮನೆಮಂದಿ ಹಾವನ್ನು ಮನೆಯೊಳಗಿಂದ ಹೊರ ಹಾಕಲು ಮನೆಯೊಳಗೆ ಹೊಗೆ ಹಾಕಲು ಮುಂದಾಗಿದ್ದಾರೆ, ಮನೆಯೊಳಗೆ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಹಾಕಿ ಬಳಿಕ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯಿಂದ ಹಾವು ಮನೆಯಿಂದ ಹೊರ ಬರಬಹುದು ಎಂದುಕೊಂಡು ಮನೆಯೊಳಗೆ ಬೆರಣಿ ರಾಶಿ ಹಾಕಿ ಹೊಗೆ ಹಾಕಿದ್ದಾರೆ, ಹೊಗೆ ಹಾಕಿದ ಕೆಲವೇ ಹೊತ್ತಿನಲ್ಲಿ ಬೆರಣಿಗೆ ಬೆಂಕಿ ಆವರಿಸಿ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
ಕಷ್ಟ ಪಟ್ಟು ಸಂಪಾದಿಸಿದ ಬೇಳೆ ಕಾಳುಗಳು, ಚಿನ್ನಾಭರಣ ಹಣ ಎಲ್ಲವೂ ಸುಟ್ಟು ಬೂದಿಯಾಗಿದ್ದು ಮನೆ ಮಂದಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಆಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ ಆದರೂ ಅಷ್ಟೋತ್ತಿಗಾಗಲೇ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಬೂದಿಯಾಗಿತ್ತು ಎನ್ನಲಾಗಿದೆ.
ಇಷ್ಟೆಲ್ಲಾ ಅವಾಂತರ ಆದ ಬಳಿಕವೂ ಮನೆಯೊಳಗಿದ್ದ ಹಾವು ಮಾತ್ರ ಎಲ್ಲಿಗೆ ಹೋಗಿದೆ ಎಂಬುದು ಮನೆಯವರಿಗೆ ಗೊತ್ತಾಗಿಲ್ಲ.