ಪುತ್ತೂರು: ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಲ್ಲತ್ತಡ್ಕ ನಿಧನ
ಪುತ್ತೂರು: ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (32.ವ) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ . 31ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸಮಾರಂಭಗಳಿಗೆ ಎಲ್‌ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಜತೆ ತಾವೇ ಎಲ್‌ಇಡಿಗಳನ್ನು ಅಳವಡಿಸುವ ಪಿಕ್ಸೆಲ್ ಕ್ರಿಯೇಟಿವ್ಸ್ ಮೂಲಕ ಖ್ಯಾತರಾಗಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.
ಮೃತರು ಪತ್ನಿ, ತಂದೆ ತಾಯಿ ಅಕ್ಕಂದಿರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.