ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ
ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಅ.30ರಂದು ಮಿತ್ತೂರಿನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾಮಾಣಿಕತೆ ಮುಖ್ಯ, ಪ್ರಾಮಾಣಿಕ ವ್ಯವಹಾರವನ್ನು ನಾವು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಜನರ ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ ಎಂದು ಅವರು ಹೇಳಿದರು.ನಾವು ಮಾಡುವ ವ್ಯವಹಾರವನ್ನು ನಾವು ಪ್ರೀತಿಸಬೇಕು, ಆಗ ಆ ವ್ಯವಹಾರ ಯಶಸ್ಸು ಕಾಣುತ್ತದೆ ಎಂದು ಹೇಳಿದ ಶಾಸಕರು ಭಾರತ್ ವೆಹಿಕಲ್ ಬಜಾರ್ ಅತ್ಯುತ್ತಮ ವ್ಯವಹಾರದ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳಗಲಿ ಶುಭ ಹಾರೈಸಿದರು.

ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಭೋದ್ ಬಿ ಶೆಟ್ಟಿ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಮೂಲಕ ಉತ್ತಮ ವಿಶ್ವಾಸಾರ್ಹ ವ್ಯವಹಾರದ ಮೂಲಕ ವಾಹನಗಳ ಖರೀದಿ, ಮಾರಾಟ ವ್ಯವಹಾರ ನಡೆಯಲಿದ್ದು ಜನರು ಪೂರ್ಣ ವಿಶ್ವಾಸದೊಂದಿಗೆ ಇಲ್ಲಿ ವ್ಯವಹರಿಸಬಹುದಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.
ವಾಹನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್ ಮಾತನಾಡಿ ವಿಶ್ವಾಸಾರ್ಹ ವ್ಯವಹಾರದ ಮೂಲಕ ಭಾರತ ವೆಹಿಕಲ್ ಬಜಾರ್ ಜನರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸರ್ವೀಸ್ ಘಟಕವನ್ನು ಉದ್ಘಾಟಿಸಿದ ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಮಾತನಾಡಿ ನೂತನವಾಗಿ ಶುಭಾರಂಭಗೊಂಡ ಭಾರತ್ ವೆಹಿಕಲ್ ಬಜಾರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.
ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಸೇವೆ, ವಿಶ್ವಾಸ, ವ್ಯವಹಾರ ಇದು ಉತ್ತಮವಾಗಿದ್ದಾಗ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಭಾರಂಭಗೊಂಡಿರುವುದು ಅತೀವ ಸಂತಸ ತಂದಿದೆ. ಇದರ ಮಾಲಕರಾದ ಅಶ್ರಫ್ ಅವರು ವೆಹಿಕಲ್ ವ್ಯವಹಾರದಲ್ಲಿ ಈಗಾಗಲೇ ಛಾಪು ಮೂಡಿಸಿದ್ದು ಈ ಸಂಸ್ಥೆ ಯಶಸ್ಸು ಕಾಣಲಿದೆ ಎಂದು ಹೇಳಿ ಶುಭ ಹಾರೈಸಿದರು.
ಯುವ ಉದ್ಯಮಿ ಬಾತಿಷಾ ಅಳಕೆಮಜಲು ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಪ್ರಾಮಾಣಿಕ ವ್ಯವಹಾರದ ಮೂಲಕ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಕೊಡಾಜೆ ಮದ್ರಸದ ಅಧ್ಯಾಪಕ ಜಾಫರ್ ಸಾದಿಕ್ ಅರ್ಷದಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಮಾತನಾಡಿ ವ್ಯವಹಾರದಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ವಿಶ್ವಾಸ ಮುಖ್ಯವಾಗಿದ್ದು 2006ರಲ್ಲಿ ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ನಮ್ಮ ಸಂಸ್ಥೆ ಜನರವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ. ಅಶ್ರಫ್ ಪುತ್ತೂರು ಮತ್ತು ನಮ್ಮದು ಆಕಸ್ಮಿಕ ಭೇಟಿಯಾಗಿದ್ದು ಅವರ ಆಲೋಚನೆಯಂತೆ ನಾವು ಗೂಡ್ಸ್ ಮತ್ತು ಕಾರು, ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವೆಹಿಕಲ್ ಯಾರ್ಡ್ ಪ್ರಾರಂಭಿಸಿದ್ದೇವೆ. ನಾವು ಅಭಿವೃದ್ಧಿ ಆಗುವುದರ ಜೊತೆಗೆಗ್ರಾಹಕರು ಕೂಡಾ ಅಭಿವೃದ್ಧಿ ಕಾಣಬೇಕೆನ್ನುವುದು ನಮ್ಮಕನಸಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಧಾರ್ಮಿಕ ವಿದ್ವಾಂಸ, ಖಾಝಿ ಝಯ್ನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಗಮಿಸಿ ಶುಭ ಹಾರೈಸಿದರು


ಗೌರವಾರ್ಪಣಾ ಕಾರ್ಯಕ್ರಮ: ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಪೈಂಟರ್ ಹರೀಶ್ ನಾಯ್ಕ ಹಾಗೂ ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್, ಉದ್ಯಮಿ ಹರೀಶ್ ಎಂ ಶೆಟ್ಟಿ ಅವರನ್ನು ಇದೇ ವೇಳೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು

ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು.

ವೇದಿಕೆಯಲ್ಲಿ ಶಾಂತ ಬಿ ಹರೀಶ್ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ನ್ಯಾಯವಾದಿ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.

ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಅತಿಥಿಗಳನ್ನು ಸತ್ಕರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಕಲ್ಲಡ್ಕ, ಶರೀಫ್ ಮಿತ್ತೂರು ಬಡಾಜೆ, ಆಸಿಫ್ ಮಠ, ಅಬ್ದುಲ್ ಖಾದರ್ ಕಬಕ ಸಹಕರಿಸಿದರು.

ಮೂರು ವಾಹನಗಳ ಮಾರಾಟ: ಶುಭಾರಂಭ ದಿನದಂದೇ ಮೂರು ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಖರೀದಿಸಿದ ಮೂವರಿಗೂ ಗಿಫ್ಟ್ ನೀಡಿ ಗೌರವಿಸಲಾಯಿತು.
ಗ್ರೂಪ್‌ನ ಚೇರ್‌ಮೆನ್, ಉದ್ಯಮಿ ಹರೀಶ್ ಎಂ ಶೆಟ್ಟಿ ಅವರನ್ನು ಇದೇ ವೇಳೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು
ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು.

ವೇದಿಕೆಯಲ್ಲಿ ಶಾಂತ ಬಿ ಹರೀಶ್ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ನ್ಯಾಯವಾದಿ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.

ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಅತಿಥಿಗಳನ್ನು ಸತ್ಕರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಕಲ್ಲಡ್ಕ, ಶರೀಫ್ ಮಿತ್ತೂರು ಬಡಾಜೆ, ಆಸಿಫ್ ಮಠ, ಅಬ್ದುಲ್ ಖಾದರ್ ಕಬಕ ಸಹಕರಿಸಿದರು.
ಮೂರು ವಾಹನಗಳ ಮಾರಾಟ: ಶುಭಾರಂಭ ದಿನದಂದೇ ಮೂರು ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಖರೀದಿಸಿದ ಮೂವರಿಗೂ ಗಿಫ್ಟ್ ನೀಡಿ ಗೌರವಿಸಲಾಯಿತು. ಪುತ್ತೂರು ತಾಲೂಕಿನಲ್ಲೇ ಪ್ರಥಮ ಗೂಡ್ಸ್ ವಾಹನಗಳ ಮಾರಾಟ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಭಾರತ್ ವೆಹಿಕಲ್ ಬಜಾರ್ ಪಾತ್ರವಾಗಿದೆ