ಕರಾವಳಿ

ಪುತ್ತೂರು ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 1.70 ಕೋಟಿ ರೂ ಅನುದಾನ ಬಿಡುಗಡೆ

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದಾಗಿ ಬೇರೆ ಯಾವುದೇ ಅಭಿವೃದ್ದಿಯಾಗುವುದಿಲ್ಲ, ಪುತ್ತೂರಿಗೆ ಇದುವರೆಗೂ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದರು. ಸರಕಾರ ಗ್ಯಾರಂಟಿ ಯೋಜನೆಯನ್ನು ಕೊಟ್ಟಿದ್ದರೂ ಕ್ಷೇತ್ರಗಳ ಅನುದಾನದಲ್ಲಿ ಯಾವುದೇ ಕೊರತೆಯನ್ನು ಮಾಡಿಲ್ಲ ಮಾಡುವುದೂ ಇಲ್ಲ. ಪುತ್ತೂರು ವಿಧಾನಸಭಾ ಕ್ಷೆತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ವಿವಿಧ ರಸ್ತೆಗಳಿಗೆ ಶಾಸಕರ ಮುತುವರ್ಜಿಯಿಂದ ಬಿಡುಗಡೆಯಾ ಅನುದಾನಗಳು: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ ರೂ 24.00 ಲಕ್ಷ , ಕೆದಿಲ ಗ್ರಾಮದ ಭಗವಂತಕೋಡಿ ಮುರುರ ಪಾಟ್ರುಕೋಡಿ

ರೂ 17.00 ಲಕ್ಷ , ಕೊಳ್ಳಿಗೆ ಗ್ರಾಮದ ಪರ್ಲಂಪಾಡಿ ಕಣಿಯಾರು ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣ 8.00 ಲಕ್ಷ , ಕೊಳ್ತಿಗೆ ಗ್ರಾಮದ ಬೈಲೋಡಿ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 6 ಲಕ್ಷ, ಕೆದಂಬಾಡಿ ಗ್ರಾಮದ ನಿಡ್ಯಾಣ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 10 ಲಕ್ಷ ,ಬಲ್ನಾಡು ಗ್ರಾಮದ ಸಾರ್ಯ ಕೋಡಿಯಡ್ಕ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣ ರೂ 10 ಲಕ್ಷ , ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ರಸ್ತೆ ರೂ 15 ಲಕ್ಷ, ಬಂಟ್ವಾಳ ತಾಲೂಕು ಬಿಳಿಯಾರು ಗ್ರಾಮದ ಪೆಜಿಕುಡೆಗುಂಡಿ ರಸ್ತೆಗೆ ರೂ 10 ಲಕ್ಷ , ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದ ರಸ್ತೆಗೆ 15 ಲಕ್ಷ , ಪುತ್ತೂರು ತಾಲೂಕು 34-ನೆಕ್ಕಿಲಾಡಿ ದರ್ಬೆ ಕಟ್ಟೆಯ ಬಳಿ ಇರುವ ರಸ್ತೆ ಕಾಂಕ್ರೀಟಿಕರಣ ರೂ 5 ಲಕ್ಷ , ಕೊಡಿಂಬಾಡಿ ಗ್ರಾಮದ ಕಲ್ಪನೆ-ಪಿಲಿಗುಂಡ ರಸ್ತೆಗೆ ರೂ 10 ಲಕ್ಷ, ಕೋಡಿಂಬಾಡಿ ಗ್ರಾಮದ ದಾರಂದ ಕುಕ್ಕು -ಬದಿನಾರು ರಸ್ತೆಗೆ ರೂ 10 ಲಕ್ಷ , ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪಾಡಿ ಗ್ರಾಮದ ಕಠಾರ ಕೊಡಿಮಾರ ರಸ್ತೆ ರೂ 10 ಲಕ್ಷ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪಾಲೆದ ಕೋಡಿ ಕೂಡ್ಲೆ ರಸ್ತೆ ಗೆ 10 ಲಕ್ಷ ಹಾಗೂ ಕೊಡಿಂಬಾಡಿ ಗ್ರಾಮದ-ಕಜೆ-ಬೆಳ್ಳಿಪ್ಪಾಡಿ ರಸ್ತೆಗೆ 10 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!