ಮೊಬೈಲ್ ಕದ್ದು ಓಡಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಯುವತಿ..!
ಬಸ್ ಗೆ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡಿದ ಕಳ್ಳನನ್ನು ಸ್ವತಃ ಯುವತಿಯೇ ಬೆನ್ನಟ್ಟಿ ಹಿಡಿದ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಸೆ.28ರಂದು ರಾತ್ರಿ ನಡೆದಿದೆ.

ಯುವತಿ ಕಳ್ಳನನ್ನು ಹಿಡಿಯುತ್ತಿದ್ದಂತೆ ಸಹಾಯಕ್ಕೆ ಬಂದ ಜನರು, ಆತನಿಗೆ ಧರ್ಮದೇಟು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಆತನನ್ನು ಪೋಲಿಸರಿಗೆ ಒಪ್ಪಿಸಿದ್ದು, ಮೊಬೈಲ್ ಕದ್ದು ಸಿಕ್ಕಿಬಿದ್ದವನು ರಾಜು ಎಂದು ಗುರುತಿಸಲಾಗಿದೆ. ಆತನನ್ನು ಠಾಣೆಗೆ ಕರೆದೊಯ್ಯದು ವಿಚಾರಣೆ ನಡೆಸುತ್ತಿದ್ದಾರೆ