ಅಬುಧಾಬಿಯಲ್ಲಿ ಗಲ್ಲಿಗೇರಿದ ಭಾರತದ ಶಹಜಾದಿ ಖಾನ್
ನವದೆಹಲಿ: 33 ವರ್ಷದ ಮಹಿಳಾ ಕೇರ್‌ಟೇಕರ್ ಶಹಜಾದಿ ಖಾನ್ ಅವರನ್ನು ಫೆ.15ರಂದು ಯುಎಇಯಲ್ಲಿ ಗಲ್ಲಿಗೇರಿಸಲಾಗಿದೆ ಎಂದು ತಿಳಿದು ಬಂದಿದೆ. ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಶಿಶುವಿನ ಕೊಲೆ ಆರೋಪದ ಮೇಲೆ ಆಕೆಗೆ ಮರಣದಂಡನೆ ವಿಧಿಸಲಾಗಿತ್ತು. ಗಲ್ಲಿಗೇರಿದ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ. ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಶಹಜಾದಿ ಖಾನ್ 2022 ಡಿ.19ರಂದು ಅಬುಧಾಬಿಗೆ ಪ್ರಯಾಣಿಸಿದ್ದರು. ಅಲ್ಲಿ ಆಕೆಯನ್ನು ಮಗುವಿನ ಕೇರ್‌ಟೇಕರ್ ಆಗಿ ನೇಮಿಸಲಾಗಿತ್ತು. ಫೆಬ್ರವರಿ 2023ರಲ್ಲಿ ಆಕೆಯನ್ನು ನೇಮಿಸಿಕೊಂಡ ದಂಪತಿಗಳು ತಮ್ಮ ಮಗುವಿನ ಸಾವಿಗೆ ಆಕೆಯೇ ಕಾರಣ ಎಂದು ಆರೋಪಿಸಿ ದೂರು ನೀಡಿದ್ದು ಬಳಿಕ ಆಕೆಯನ್ನು ಬಂಧಿಸಲಾಗಿತ್ತು.
ಜುಲೈ 31, 2023ರಂದು ಆಕೆಗೆ ಮರಣದಂಡನೆ ವಿಧಿಸಲಾಯಿತು. 2024ರ ಫೆಬ್ರವರಿ 28ರಂದು ನ್ಯಾಯಾಲಯವು ಈ ತೀರ್ಪನ್ನು ಎತ್ತಿಹಿಡಿಯಿತು. ಆಕೆಯ ಮರಣದಂಡನೆಗೆ ಮುಂಚಿತವಾಗಿ ಆಕೆಯನ್ನು ಅಲ್ ವಾಥ್ಬಾ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಆಕೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಅದು ವಜಾಗೊಂಡಿತ್ತು
ಗಲ್ಲುಶಿಕ್ಷೆಗೆ ಒಳಗಾಗಿರುವ ಆಕೆಯ ಅಂತ್ಯಕ್ರಿಯೆ ಮಾರ್ಚ್ 5ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.