ಹಾಲಶ್ರೀ ಸಿಕ್ಕಿ ಬಿದ್ದದ್ದು ಹೇಗೆ? ಎಲ್ಲಿಂದ ಎಲ್ಲಿಗೆ ಹೋಗಿದ್ದು ಗೊತ್ತಾ?
ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯಾಗಿರುವ ಹಾಲಾಶ್ರೀ ಸ್ವಾಮಿ ಕೊನೆಗೂ ಸಿಕ್ಕಿ ಬಿದ್ದಿದ್ದು ಕರ್ನಾಟಕದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಬಳಿಕ ಹೈದರಾಬಾದ್ ವಿಮಾನ ನಿಲ್ದಾಣದಿಂದ ಓಡಿಶಾದ ಕಟಕ್‌ಗೆ ತೆರಳಿದ್ದ ಸ್ವಾಮೀಜಿ, ನಂತರ ಖಾವಿ ಬಿಟ್ಟು ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭವನೇಶ್ವರಿಯಿಂದ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಚೈತ್ರಾ ಹೇಳಿದಂತೆ ಈ ವಂಚನೆ ಕೇಸಲ್ಲಿ ಸ್ವಾಮೀಜಿ ಬಂಧನದಿಂದ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತಾ ಎನ್ನುವ ಕುತೂಹಲ ಎಲ್ಲೆಡೆ ಉಂಟಾಗಿದೆ.