ಪುತ್ತೂರು: ನಿಡ್ಪಳ್ಳಿ ದೇವಸ್ಥಾನದಲ್ಲಿ ಕಳ್ಳತನ- ಪ್ರಕರಣ ದಾಖಲು
ಪುತ್ತೂರು ತಾಲೂಕಿನ ನಿಡ್ಪಳ್ಳಿ ಶಾಂತದುರ್ಗ ದೇವಸ್ಥಾನದ ಕಾಣಿಕೆ ಹುಂಡಿಯಿಂದ ಹಣ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ.
ಸೆ 12.ರ ರಾತ್ರಿ ಕಳ್ಳತನ ನಡೆದಿದ್ದು ಸೆ.13 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಕುರಿತು ಶಾಂತದುರ್ಗ ದೇವಸ್ಥಾನದ ಅಧ್ಯಕ್ಷ ನಾರಾಯಣ ರೈ ಯವರು ದೂರು ನೀಡಿದ್ದು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ 12 ರಂದು ರಾತ್ರಿ ಪೂಜೆಯ ಬಳಿಕ ದೇವಸ್ಥಾನದ ಬೀಗ ಹಾಕಿ ಹೋಗಿದ್ದು, ಮರುದಿನ ಬೆಳಗ್ಗೆ ದೇವಸ್ಥಾನದ ಅರ್ಚಕರು ದೇವಸ್ಥಾನಕ್ಕೆ ಬಂದಾಗ, ಅಲ್ಲಿ ಇದ್ದ ಎರಡೂ ಕಾಣಿಕೆ ಹುಂಡಿಗಳ ಮುಚ್ಚಳದ ಬೀಗ ಮುರಿದಿರುವುದು ಕಂಡು ಬಂದಿದೆ, ಪರಿಶೀಲಿಸಿದಾಗ ಯಾರೋ ಹುಂಡಿಗಳ ಬೀಗವನ್ನು ಮುರಿದು ಅದರಲ್ಲಿದ್ದ ಅಂದಾಜು 43,000 ರೂ ಹಣವನ್ನು ಕಳವು ಮಾಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.