ಕರಾವಳಿರಾಜಕೀಯರಾಜ್ಯ

ಸುಳ್ಯ: ಬಡವರಿಗೆ, ಮಹಿಳೆಯರಿಗೆ ಕಾಂಗ್ರೆಸ್ ಸರಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ ಬಿಜೆಪಿ ಮುಖಂಡರು ಯೋಜನೆಗಳನ್ನು ಪಡೆದುಕೊಳ್ಳದಿದ್ದಲ್ಲಿ ಸಾರ್ವಜನಿಕ ಹೇಳಿಕೆ ಕೊಡಲಿ: ಎಂ ವೆಂಕಪ್ಪ ಗೌಡ

ಸುಳ್ಯ: ಭಾರತೀಯ ಜನತಾ ಪಾರ್ಟಿಯವರು ನಮ್ಮ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಟೀಕೆ ಮಾಡುತ್ತಿದ್ದಾರೆ. ಟೀಕೆ ಪ್ರಜಾಪ್ರಭುತ್ವದಲ್ಲಿ ಸ್ವಾಗತಾರ್ಹ ಆದರೆ ಸುಳ್ಯ ಶಾಸಕರು ಪಂಚ ಗ್ಯಾರಂಟಿ ಯೋಜನೆಗಳನ್ನು ಒಬ್ಬ ಮಹಿಳೆಯಾಗಿ,ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮಸರಕಾರ ಮಾಡಿದ ,ಬಿಜೆಪಿಯವರು ಕನಸುಮನಸಿನಲ್ಲು ಮಾಡಲು ಅಸಾಧ್ಯವಾದ, ಅದ್ಬುತ ಯೊಜನೆಗಳನ್ನು ಬಿಟ್ಟಿಭಾಗ್ಯ ಎಂದು ಟೀಕೆ ಮಾಡುವುದು ಖಂಡನೀಯ. ಬಿಜೆಪಿಯವರು ನಮ್ಮ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಜಾರಿಯಾಗಿಲ್ಲ ಎಂಬಂತೆ ಬಿಂಬಿಸಲು ಬಣ್ಣ ಹಚ್ಚಿ ಟೀಕೆಯನ್ನು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸುಳ್ಯ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ತಿಳಿಸಿದ್ದಾರೆ.

ಈ ಗ್ಯಾರಂಟಿ ಯೋಜನೆಗಳನ್ನು ಶಾಸಕಿ ಮತ್ತು ಬಿಜೆಪಿ ನಾಯಕರನ್ನೊಳಗೊಡಂತೆ ಯಾರೂ ಕೂಡಾ ಪಡೆದುಕೊಂಡಿಲ್ಲದಿದ್ದರೆ ಸಾರ್ವಜನಿಕವಾಗಿ ಹೇಳಿಕೆ ಕೊಡಲಿ. ಅದು ಬಿಟ್ಟು ಎಲ್ಲಾ ಯೋಜನೆಗಳನ್ನು ಅನುಭವಿಸಿಕೊಂಡು ಈ ರೀತಿ ಟೀಕೆ ಮಾಡುತ್ತಿರುವುದು ಇವರ ಎಡಬಿಡಂಗಿತನವನ್ನು ಎತ್ತಿ ತೋರಿಸುತ್ತದೆ ,ನಾನು ಬಿಜೆಪಿಯ ಪುರುಷ ನಾಯಕರಲ್ಲಿ ಪ್ರಶ್ನೆ ಮಾಡುತ್ತೇನೆ, ನಮ್ಮ ಶಕ್ತಿ ಯೋಜನೆ ಸಮರ್ಪಕವಾಗಿ ಆಗಿದೆಯೇ ಇಲ್ಲವೇ ಎಂದು ತೀರ್ಮಾನಿಸಲು ನೀವು ಅಶಕ್ತರಾಗಿದ್ದೀರಿ. ಕಾರಣ ಅದರಲ್ಲಿ ಓಡಾಡುವವರು ನಿಮ್ಮ ಮನೆಯ ಮಹಿಳೆಯರು, ಹಾಗೆಯೇ ಗೃಹಲಕ್ಷ್ಮಿಯ ಪಲಾನುಭವಿಗಳು ಸಹ ನಿಮ್ಮ ಮನೆಯ ತಾಯಂದಿರೇ, ಮಹಿಳೆಯರೇ ಆಗಿದ್ದಾರೆ ಎಂದರು.


ಅನ್ನಭಾಗ್ಯವನ್ನು ಪಡೆಯುವಂತಹ ಪಲಾನುಭವಿಗಳು ಇವತ್ತು ಭಾಷಣ ಮಾಡುವಂತ ನಿಮ್ಮಂತ ಶ್ರೀಮಂತರಲ್ಲ. ಅವರು ಕಡು ಬಡವರು. ಆ ಕಾರಣಕ್ಕಾಗಿ ಇವರು ನಮ್ಮ ಗ್ಯಾರಂಟಿ ಯೋಜನೆಗಳು ಕಾರ್ಯಗತ ವಾಗಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ.
ಹಾಗಾಗಿ ನಾನು ಅರ್ಥೈಸಿಕೊಂಡಂತೆ ವಾಸ್ತವವಾಗಿ ಆಗಿದೆಯೋ ಇಲ್ಲವೋ ಎಂದು ಅವರವರ ಮನೆಯ ಮಾತೆಯರಲ್ಲಿ, ಗೃಹಲಕ್ಷ್ಮಿಯವರಲ್ಲಿ ಕೇಳಿ ತಿಳಿದುಕೊಳ್ಳಲಿ, ಇಂದು ಟೀಕೆ ಮಾಡುತ್ತಿರುವ ನಾಯಕರು ಅರ್ಹ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಲ್ಲಿ ಅವರ ಮನೆಯ ವಿದ್ಯುತ್ ಬಿಲ್ ಸೊನ್ನೆ ಬಂದಿರುವುದನ್ನು ಅನುಭವಿಸಿಕೊಂಡು ಅದನ್ನು ಗಮನಿಸಿಯೂ ಗಮನಿಸದಂತೆ ಜಾಣ ಕುರುಡುತನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಿಮ್ಮ ಮನೆಗೆ ಶಕ್ತಿ ನೀಡುವ ನಿಮ್ಮ ಮನೆಯ ತಾಯಂದಿರಲ್ಲಿ, ಗೃಹಲಕ್ಷ್ಮಿಯರಲ್ಲಿ ಸ್ವಲ್ಪ ಈ ಬಗ್ಗೆ ತಿಳಿದುಕೊಂಡು ಟೀಕೆ ಮಾಡಲು ಹೋಗಿ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!