ಪುತ್ತೂರು: ಸರ್ವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್: ತಪ್ಪಿದ ಭಾರೀ ಅನಾಹುತ
ಪುತ್ತೂರು- ಸವಣೂರು ಮಧ್ಯೆ ಇರುವ ಸರ್ವೆ ಎಂಬಲ್ಲಿ KSRTC ಬಸ್ ರಸ್ತೆ ಬದಿಯ ಚರಂಡಿಗೆ ಬಿದ್ದು ಕೆಲವರು ಗಾಯಗೊಂಡ ಘಟನೆ ಸೆ.11ರಂದು ಸಂಜೆ ನಡೆದಿದೆ.
ಪುತ್ತೂರಿನಿಂದ ಪಂಜಕ್ಕೆ ತೆರಳುತ್ತಿದ್ದ ಬಸ್ ಸರ್ವೆ ತಲುಪಿದಾಗ ವಿರುದ್ದ ದಿಕ್ಕಿನಿಂದ ಬಂದ ಕಾರ್ ಗೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಕಣಿಗೆ ಬಿದ್ದಿದ್ದು ಈ ವೇಳೆ ಬಸ್ ನ ಮುಂಭಾಗ ಧರೆಗೆ ಗುದ್ದಿ ನಿಂತಿದೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆ ನಡೆದ ವೇಳೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.