ಕರಾವಳಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆ.ಪಿ ಅಹ್ಮದ್ ಹಾಜಿಯವರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ನಿಂದ ಅಭಿನಂದನೆ



ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಗತಿ ಕಾಣಬೇಕು ಎನ್ನುವ ಕನಸು ಮತ್ತು ಇಚ್ಚಾಶಕ್ತಿಯಿಂದ ದುಡಿದ ಕೆಲವೇ ಮಹನಿಯರಲ್ಲಿ ಪುತ್ತೂರಿನ ಕೆ.ಪಿ ಅಹ್ಮದ್ ಹಾಜಿಯವರೂ ಒಬ್ಬರಾಗಿದ್ದಾರೆ. ದಶಕದ ಹಿಂದೆ ಜಾಗೃತಿ ಮತ್ತು ಅವಕಾಶಗಳು ಕಡಿಮೆ ಇದ್ದ ಕಾಲದಲ್ಲಿ ಅವರು ಪುತ್ತೂರು ತಾಲೂಕಿನಲ್ಲಿ ಆರಂಭಿಸಿದ ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಅವರ ದೂರದೃಷ್ಠಿಯ ಯೋಚನೆಯನ್ನು ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆ ಅವರ ರಚನಾತ್ಮಕ ಯೋಜನೆಗೆ ಸಾಕ್ಷಿಯಾಗಿದೆ. ಕುಂಬ್ರದಲ್ಲಿ ಇವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಕೆ.ಐ.ಸಿ ಸಮನ್ವಯ ಶಿಕ್ಷಣ ಸಂಸ್ಥೆ ದಾರ್ಮಿಕ ನೇತೃತ್ವ ನೀಡಲು ಪ್ರಬುದ್ದ ಪಂಡಿತರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ತನ್ನ ಯುವತ್ವದಲ್ಲೇ ಪುತ್ತೂರೆಂಬ ಹಿಂದುಳಿದಿದ್ದ ಊರಿನಲ್ಲಿ ಭವಿಷ್ಯದ ಪ್ರಗತಿಯ ಸಂಕಲ್ಪದಿಂದ ದುಡಿದ ಕೆ.ಪಿ ಅಹ್ಮದ್ ಹಾಜಿಯವರಿಗೆ ಅರ್ಹವಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಪುತ್ತೂರು ಕಮ್ಯೂನಿಟಿ ಸೆಂಟರ್ (ಸಿ.ಆರ್.ಡಿ.ಎಫ್) ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ ಲ್.

ಕಿರಿಯರಿಗೆ ಸದಾ ಮಾರ್ಗದರ್ಶಕರಾದ ಇವರ ಆಕರ್ಷಕ ವ್ಯಕ್ತಿತ್ವ, ಸರಳತೆ, ಮೃದು ಮಾತು, ತಾಳ್ಮೆಯ ಸಂವಹನ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಅಗಾಧ ಜ್ಞಾನ, ಸಮಾಜದ ಪ್ರಸ್ತುತ ವಿಷಯಗಳ ಕುರಿತು ಸ್ಪಷ್ಟ ಧಾರಣೆ ಇರುವ ಕೆ.ಪಿ.ಅಹ್ಮದ್ ಹಾಜಿಯವರು ಸಮಾಜದ ಒಳಿತಿಗೆ ದುಡಿಯುವ ಸಂಘ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಶುದ್ದಚಿತ್ತದಿಂದ ಸಹಕರಿಸುತ್ತಾರೆ. ಇವರಿಗೆ ಸಿಕ್ಕಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಮೆರುಗು ಬರುವಂತೆ ಇರುವ ಕೆ.ಪಿ ಅಹ್ಮದ್ ಹಾಜಿಯವರ ಕೊಡುಗೆಗಳು ಇನ್ನಷ್ಟೂ ಈ ಸಮಾಜಕ್ಕೆ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ
ಹಾಗೂ ಅವರನ್ನು ಅಭಿನಂದಿಸುತ್ತೇವೆ ಎಂದು ಅಮ್ಜದ್ ಖಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!