ಜಿಲ್ಲೆ

ದೇವರಗುಂಡದಲ್ಲಿ ತೋಟಕ್ಕೆ ಆನೆಗಳ ದಾಳಿ: ರೈತರಲ್ಲಿ ಆತಂಕ



ಕೆಲವು ತಿಂಗಳಿನಿಂದ ಆನೆಗಳ ಉಪಟಳವಿಲ್ಲದೆ ನಿರಾಳವಾಗಿದ್ದ ರೈತರ ತೋಟಕ್ಕೆ ಆನೆ ದಾಳಿ ಮಾಡುವ ಮೂಲಕ ಮತ್ತೆ ಅವರ ನಿದ್ದೆಗೆಡಿಸಿದೆ. ಒಂದು ವರ್ಷದ ಹಿಂದೆ ದೇವರಗುಂಡದಲ್ಲಿ ತೋಟಗಳಿಗೆ ಸತತವಾಗಿ ಆನೆಗಳು ದಾಳಿಮಾಡಿ ಅಲ್ಲೇ ಹತ್ತಿರದ ಕಾಡಿನಲ್ಲಿ ಬೀಡುಬಿಟ್ಟಿದ್ದವು. ಆಗ ಆ ಭಾಗದ ಕೃಷಿಕರು ಕೇಂದ್ರಸರಕಾರದ ಯೋಜನೆಯಾದ ಖಾದಿ ಮತ್ತು ಗ್ರಾಮದ್ಯೋಗ ಇಲಾಖೆಯಿಂದ ಮತ್ತು ಸುಳ್ಯ ಜೇನು ಸೊಸೈಟಿ ವತಿಯಿಂದ ಖುದ್ದಾಗಿ ಬೇಟಿ ನೀಡಿ ಹಾನಿಗೀಡಾದ ಕೃಷಿಕರಿಗೆ ತಲಾ 10 ಜೇನು ಪೆಟ್ಟಿಗೆ ಕುಟುಂಬ ಸಮೇತ ನೀಡಿರುತ್ತಾರೆ. ಅದನ್ನು ಆನೆ ಬರುವ ದಾರಿಗೆ ಅಡ್ಡಲಾಗಿ ಒಂದಕ್ಕೊಂದು ಜೋಡಣೆ ಮಾಡಿ ಇರಿಸಲಾಗಿತ್ತು. ಇದರಿಂದ ಯಶಸ್ವಿಯನ್ನೂ ಕಂಡರು. ಅ ನಂತರ ಆನೆಗಳು ದಾಳಿಮಾಡಿರಲಿಲ್ಲ. ಇದೀಗ ದಾರಿ ಬದಲಿಸಿ ಬೇರೆ ದಾರಿಯಿಂದ ಸತತವಾಗಿ ಎರಡು ದಿನಗಳಿಂದ ದಾಳಿ ಮಾಡಲು ಪ್ರಾರಂಭಿಸಿವೆ. ಆದ್ದರಿಂದ ಆ ಭಾಗದ ಕೃಷಿಕರ ನೆಮ್ಮದಿ ಕೆಡಿಸಿವೆ.

ಅರಣ್ಯ ಇಲಾಖೆ ಯವರಿಗೆ ಮಾಹಿತಿ ನೀಡಿ ಎರಡೂ ದಿನವೂ ರಾತ್ರಿ ಬಂದು ಓಡಿಸಿರುತ್ತಾರೆ. ಆದರೆ ಹಗಲು ಹೊತ್ತಿನಲ್ಲಿ ಹೊಳೆಯಿಂದ ಆಚೆ ಕೇಣಾಜೆ ಕಾಡಿಲ್ಲಿ ಇದ್ದುಕೊಂಡು ಸಂಜೆಯಾಗುತ್ತಲೇ ಹೊಳೆ ದಾಟಿ ಆ ಭಾಗದ ಕೃಷಿಕರಾದ ಬಾಲಚಂದ್ರ ದೇವರಗುಂಡ, ಡಿ. ವಿ. ಸುರೇಶ್ ದೇವರಗುಂಡ, ಉಮೇಶ್ ದೇವರಗುಂಡ, ಕೇಶವ ದೇವರಗುಂಡ, ಮುಕುಂದ ದೇವರಗುಂಡ, ನಾಗೇಶ್ ದೇವರಗುಂಡ, ತಿಮ್ಮಪ್ಪ ದೇವರಗುಂಡ, ಆಶಿಕ್ ದೇವರಗುಂಡ ಇವರ ತೋಟಗಳಿಗೆ ದಾಳಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!