ಕರಾವಳಿರಾಜಕೀಯ

ಶಾಸಕರ ಪ್ರೀತಿಯ ಜೈನುದ್ದೀನ್ ಹಾಜಿ ನಿಧನ
ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಅಶೋಕ್ ರೈ


ಪುತ್ತೂರು;ತನ್ನ ಬಾಲ್ಯದ ಕಾಲದಲ್ಲಿ ನೆರೆಯ ಮನೆಯಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದ ಮನೆ ಮಾಲಿಕ ಜೈನುದ್ದೀನ್ ಹಾಜಿಯವರು ಇತ್ತೀಚೆಗೆ ನಿಧನರಾಗಿದ್ದು ಅವರ ಮನೆಗೆ ಭೇಟಿ ನೀಡಿದ ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಿದರು.


ಶಾಸಕರಾದ ಅಶೋಕ್ ರೈಯವರು ಬಾಲ್ಯದ ಸಮಯದಲ್ಲಿ ಮನೆಯಲ್ಲಿ ತುಂಬಾ ಬಡತವಿತ್ತು. ನೆರೆಯ ಜೈನುದ್ದೀನ್ ಹಾಜಿಯವರ ಮನೆಯಲ್ಲಿ ಸಾಕಷ್ಟು ಸಂಖ್ಯೆಯ ದನಗಳಿದ್ದವು, ನೆರೆಯವರೆಲ್ಲರೂ ಇದೇ ಮನೆಯಿಂದ ಹಾಲು ಕೊಂಡು ಹೋಗುತ್ತಿದ್ದರು.

ಅಶೋಕ್ ರೈಯವರು ಇದೇ ಮನೆಯಿಂದ ತನ್ನ ಮನೆಗೆ ಹಾಲು ಕೊಂಡು ಹೋಗುತ್ತಿದ್ದರು. ಹಾಲಿಗೆ ಹೋದ ಬಾಲಕ ಅಶೋಕ್ ರೈಯವರು ಅದೇ ಮನೆಯಲ್ಲಿ ಅವರು ಕೊಡುವ ದೋಸೆ, ತಿಂಡಿ ತಂದ ಬಳಿಕವೇ ಹಾಲು ತಗೊಂಡು ಮನೆಗೆ ಬರುತ್ತಿದ್ದರು. ದಿನದ ಹೆಚ್ಚಿನ ಹೊತ್ತನ್ನು ಇದೇ ಮನೆಯಲ್ಲಿ ಕಳೆಯುತ್ತಿದ್ದರು. ಈ ವಿಚಾರವನ್ನು ಚುನಾವಣಾ ಪ್ರಚಾರ ಭಾಷಣದ ವೇಳೆ ಹಲವು ಬಾರಿ ಶಾಸಕರು ಸಾಮರಸ್ಯದ ವಿಚಾರವಾಗಿ ಹೇಳುತ್ತಿದ್ದರು. ತನ್ನ ಬಾಲ್ಯದ ಸಮಯದಲ್ಲಿ ಅನ್ನ ಹಾಕಿದ್ದ ಜೈನುದ್ದೀನ್ ಹಾಜಿಯವರು ಇತ್ತೀಚೆಗೆ ನಿಧನರಾಗಿದ್ದು ನಿಧನರಾದ ವೇಳೆ ಶಾಸಕರು ಊರಲಿಲ್ಲಿರಲಿಲ್ಲ. ಈ ಕಾರಣಕ್ಕೆ ಸೆ.9 ರಂದು ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ತನ್ನ ಬಾಲ್ಯ ಕಾಲದ ನೆನಪ್ಪನ್ನು ಮೆಲು ಹಾಕಿ ಭಾವುಕರಾದರು. ಈ ಸಂದರ್ಭದಲ್ಲಿ ಜೈನುದ್ದೀನ್ ಸಹೋದರರಾದ ಹುಸೈನ್, ದಾವೂದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!