ಬಪ್ಪಳಿಗೆ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ
ಅಧ್ಯಕ್ಷರಾಗಿ ಮೋನು ಬಪ್ಪಳಿಗೆ ಪುನರಾಯ್ಕೆ
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಹಿಕ್, ಕೋಶಾಧಿಕಾರಿಯಾಗಿ ಅಲ್ತಾಫ್ ಯು.ಕೆ
ಪುತ್ತೂರು: ಬಪ್ಪಳಿಗೆಯ ಉತ್ಸಾಹಿ ತರುಣರ ಸಂಘಟನೆಯಾದ ಅನ್ಸಾರುಲ್ ಇಸ್ಲಾಂ ಯುವಕ ಸಮಿತಿಯ 2023-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮೋನು ಬಪ್ಪಳಿಗೆ ಯವರು ಪುನರಾಯ್ಕೆ ಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾಹಿಕ್, ಕೋಶಾಧಿಕಾರಿಯಾಗಿ ಅಲ್ತಾಫ್ ಯು. ಕೆ ಆಯ್ಕೆಯಾದರು.
ಸ್ಥಳೀಯ ಮದ್ರಸ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆಯು ನಡೆದಿದೆ. ಮಸ್ಜಿದುನ್ನೂರು ಮಸೀದಿ ಹಾಗೂ ಮದ್ರಸ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಲವ್ಲಿಯವರ ಅಧ್ಯಕ್ಷತೆಯಲ್ಲಿ, ಸ್ಥಳೀಯ ಖತೀಬರೂ ಸಮಿತಿಯ ಗೌರವಾಧ್ಯಕ್ಷರೂ ಆದ ಸಿರಾಜುದ್ದೀನ್ ಫೈಝಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಸಾಂಘಿಕ ಕ್ಷೇತ್ರದಲ್ಲಿ ಯುವಕರ ಜವಾಬ್ದಾರಿಯನ್ನು ವಿವರಿಸಿದರು.ಮಸೀದಿಯ ಪ್ರಧಾನ ಕಾರ್ಯದರ್ಶಿಗಳಾದ ಇಕ್ಬಾಲ್ ಯು.ಕೆ.ಯವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಗಳನ್ನು ನಿರ್ವಹಿಸಿದರು.
ಕಳೆದ ನಲುವತ್ತಕ್ಕಿಂತಲೂ ಅಧಿಕ ವರ್ಷಗಳಿಂದ ಮೊಹಲ್ಲಾ ಬಾಂಧವರ ಸಾಮಾಜಿಕ, ಸಾಮುದಾಯಿಕ, ಶೈಕ್ಷಣಿಕ ಹಾಗೂ ಇನ್ನಿತರ ಕಾರ್ಯಗಳಿಗೆ ತನ್ನದೇ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸಮಿತಿಯು ಜನಪರ ಸೇವೆಗಳಿಂದ ಜನಪ್ರಿಯತೆ ಗಳಿಸಿದೆ.
‘ಯೌವ್ವನ ಒಳಿತಿಗಾಗಿ’ ಎಂಬ ಘೋಷ ವಾಕ್ಯದಡಿ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯರ ಸೇರ್ಪಡೆಗಾಗಿ ಒಂದು ತಿಂಗಳ ಕಾಲ ನಡೆಸಿದ ಸದಸ್ಯತ್ವ ಅಭಿಯಾನದ ಮೂಲಕ ಸಮಿತಿಗೆ ಸೇರ್ಪಡೆಗೊಂಡ ಸದಸ್ಯರಲ್ಲಿ ಇಪ್ಪತ್ತೊಂದು ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರುಗಳಾಗಿ ಸವಾದ್ ಲಬಾಂಬ,
ಹಾಜಿ ಸಾದಿಕ್ ಕೆ.ವೈ.ಪಿ.,
ಜೊತೆಕಾರ್ಯದರ್ಶಿಗಳಾಗಿ ನೂರುದ್ದೀನ್ ಬಿ.ಹೆಚ್,
ಆಸೀಫ್ ಪಿ.ಬಿ ,ಸಂಘಟನಾ ಕಾರ್ಯದರ್ಶಿಗಳಾಗಿ ಬಶೀರ್ ಬಂಗಾರಿ,ಉಮರ್ ಕರ್ಕುಂಜ,
ತುರ್ತು ಸೇವೆಗಳ ಉಸ್ತುವಾರಿಗಳಾಗಿ ಶರೀಫ್,ಇಸಾಕ್ ಕರ್ಕುಂಜ, ರಮೀಝ್, ಮಸೂದ್, ಸವಾದ್ ಪಿ.ಬಿ, ಉಮರ್, ಆಶಿಕ್ ಜನತಾ ಸ್ಕೇಲ್.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜಲಾಲ್ ಪಿ.ಬಿ, ಶಾಕಿರ್, ಸಜಾಬ್ ಯಸ್. ಕೆ, ಹುರೈಸ್ ಜನತಾ ಸ್ಕೇಲ್, ಫಾರೂಕ್,ಕಲೀಲ್, ಸಫ್ವಾನ್,, ಶಿಹಾಬ್ ಪಿ.ಬಿ ಯವರನ್ನು ಸದಸ್ಯರುಗಳನ್ನಾಗಿ
ಆಯ್ಕೆ ಮಾಡಲಾಯಿತು .
ಬಿ.ಹೆಚ್.ಅಬ್ದುಲ್ ರಝಾಕ್ ಸ್ವಾಗತಿಸಿ, ವಂದಿಸಿದರು.