ಕರಾವಳಿರಾಜಕೀಯ

ಅಧಿಕಾರಿಗಳು, ಉದ್ಯಮಿಗಳಲ್ಲಿ ಹಣದ ಬೇಡಿಕೆ
ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ: ಶಾಸಕ ಅಶೋಕ್ ರೈ


ಪುತ್ತೂರು: ನನ್ನ ಹೆಸರು ಹೇಳಿಕೊಂಡು ಕೆಲವರು ಸರಕಾರಿ ಇಲಾಖೆಯ ಅಧಿಕಾರಿಗಳ ಬಳಿ, ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಕೊಡಬೇಕಾದ ಅವಶ್ಯಕತೆಯಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ತಿಳಿಸಿದ್ದಾರೆ.


ಕಳೆದ ಹಲವಾರು ದಿನಗಳಿಂದ ಈ ರೀತಿಯ ವಿಚಾರಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ಅಧಿಕಾರಿಗಳ ಬಳಿಯಾಗಲಿ, ಉದ್ಯಮಿಗಳ ಬಳಿಯಾಗಲಿ ಚುನಾವಣೆಗೆ ಮುನ್ನವೂ ಹಣ ಕೇಳಿಲ್ಲ ಆ ಬಳಿಕವೂ ಕೇಳಿಲ್ಲ ಇನ್ನು ಕೇಳುವುದೂ ಇಲ್ಲ ಅದರ ಅಗತ್ಯತೆ ನನಗಿಲ್ಲ. ನನ್ನ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳ ಬಳಿ , ಉದ್ಯಮಿಗಳ ಬಳಿ ಹಣ ಕೇಳಿದರೆ ಅವರು ಕೊಡಬೇಕಾದ ಅಗತ್ಯವಿಲ್ಲ. ಶಾಸಕರು ಹೇಳಿರಬಹುದೇ ಎಂಬ ಅನುಮಾನವೇ ಬೇಡ ನಾನು ಯಾರಲ್ಲೂ ಹಣ ಕಲೆಕ್ಷನ್ ಮಾಡಲು ಹೇಳಿಯೂ ಇಲ್ಲ , ಮುಂದಕ್ಕೆ ಹೇಳುವುದೂ ಇಲ್ಲಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!