ಆಮ್ ಆದ್ಮಿ ಪಾರ್ಟಿ ದ.ಕ ಜಿಲ್ಲಾಧ್ಯಕ್ಷರಾಗಿ ಡಾ.ವಿಶು ಕುಮಾರ್
ಪುತ್ತೂರು: ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾಧ್ಯಕ್ಷರಾಗಿ ಡಾ.ವಿಶು ಕುಮಾರ್ ನೇಮಕಗೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯ ಸಮಿತಿಯು ವಿವಿಧ ಜಿಲ್ಲೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ಪ್ರ.ಕಾರ್ಯದರ್ಶಿಯಾಗಿ ಖಲಂದರ್ ಎಲಿಮಲೆ, ಸಂಘಟನಾ ಕಾರ್ಯದರ್ಶಿಗಳಾಗಿ ಶಾನನ್ ಪಿಂಟೋ, ಸದಾಶಿವ ರಾವ್ ಹಾಗೂ ಜನಾರ್ದನ ಬಂಗೇರ ನೇಮಕಗೊಂಡಿದ್ದಾರೆ.
ಮಹಿಳಾ ಘಟಕದ ಅಧ್ಯಕ್ಷರಾಗಿ ವಿದ್ಯಾ ರಾಕೇಶ್, ಯುವ ಘಟಕದ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ನೇಮಕಗೊಂಡಿದ್ದಾರೆ.