ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಿಡುಗಡೆಗೊಳಿಸುವಂತೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಝಮೀರ್ ಅಹ್ಮದ್‘ಗೆ ಮನವಿ
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಅಲ್ಪ ಸಂಖ್ಯಾತ ಸಮುದಾಯದ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಓವರ್ ಸೀಸ್ ಸ್ಟಡೀಸ್ ಸ್ಕಾಲರ್ ಶಿಪ್ (ವಿದ್ಯಾರ್ಥಿ ಶಿಷ್ಯ ವೇತನ) ಬಿಡುಗಡೆ ಗೊಳಿಸುವಂತೆ ವಸತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ರವರಿಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ. ಶಹೀದ್, ಕೆಪಿಸಿಸಿ ಸಂಯೋಜಕ ಎಸ್ ಸಂಶುದ್ದೀನ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿದರು.
ಸ್ಪೀಕರ್ ಯು. ಟಿ. ಖಾದರ್ ಫರೀದ್ ರವರ ಸಮ್ಮುಖದಲ್ಲಿ ವಿಧಾನಸೌದ ಸಭಾಂಗಣದಲ್ಲಿ ನಡೆದ ದ. ಕ ಜಿಲ್ಲೆಯ ಅಲ್ಪಸಂಖ್ಯಾತರ ಮುಖಂಡರ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು
ಮನವಿ ಸ್ವೀಕರಿಸಿದ ಸಚಿವರು ಸ್ಕಾಲರ್ ಶಿಪ್ ಬಿಡುಗಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಲ್ಪಸಂಖ್ಯಾತ ಇಲಾಖೆಯ ಸರಕಾರದ ಪ್ರದಾನ ಕಾರ್ಯದರ್ಶಿ ಮಹೇಂದ್ರ ಜೈನ್, ನಿರ್ದೇಶಕರಾದ ಜೀಲಾನಿ ಮೋಕಾಶಿ, ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಯೇನಪೋಯ ವಿಶ್ವ ವಿದ್ಯಾನಿಲಯ ಕುಲಪತಿ ವೈ. ಅಬ್ದುಲ್ಲ ಕುoಞ, ಎಸ್. ಎಂ. ಅರ್. ರಶೀದ್ ಹಾಜಿ ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಪದಾಧಿಕಾರಿಗಳಾದ ಅಬ್ದುಲ್ ರಝಕ್ ಗೊಳ್ತಮಜಲು, ಇಕ್ಬಾಲ್ ಕಾಟಿಪ್ಪಳ್ಳ, ಮೊದಲಾವರು ಉಪಸ್ಥಿತರಿದ್ದರು