ಪುತ್ತೂರು: ಕೆನರಾ ಕ್ಲೋಥಿಂಗ್ ಅಧೀನದಲ್ಲಿ ‘ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಶುಭಾರಂಭ
ಪುತ್ತೂರು: ಕೆನರಾ ಕ್ಲೋಥಿಂಗ್ ಸಂಸ್ಥೆಯ ಅಧೀನದಲ್ಲಿ ‘ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಇಲ್ಲಿನ ಕೆಎಸ್‌ಆರ್‌ಟಿಸಿ ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಹ್ಯಾಬಿಟೂಡ್ ಹತ್ತಿರ ಸೆ.4ರಂದು ಶುಭಾರಂಭಗೊಂಡಿತು.
ಉದ್ಯಮಿ ಮಹಮ್ಮದ್ ಉಸೈನ್(ಅಶ್ರಫ್ ಕಟ್ಲೇರಿ) ಅವರು ಉದ್ಘಾಟಿಸಿದರು. ಮುನೀರುಲ್ ಮೌಲವಿ ಅವರು ಪ್ರಾರ್ಥನೆ ನೆರವೇರಿಸಿದರು. ಥ್ರಡ್ ಬುಟಿಕ್‌ನ ಮಾಲಕ ಜಾವೇದ್ ಇಬ್ರಾಹಿಂ ಅವರು ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಇಸ್ಮಾಯಿಲ್ ಕೆನರಾ, ಝೊಹರಾ ಕೆನರಾ, ಅರ್ಷದ್ ಕೆನರಾ, ಅಫ್ಝಲ್ ಕೆನರಾ, ಇರ್ಷಾದ್, ಸನಾ ಕೆನರಾ, ಅಫೀಕ್ ಇಸ್ಮಾಯಿಲ್, ಮತ್ತಿತರರು ಉಪಸ್ಥಿತರಿದ್ದರು. ಅನೇಕ ಗಣ್ಯರು ಆಗಮಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.
ಮಾಲಕ ಇಬ್ರಾಹಿಂ ಜಾವೇದ್ ಮಾತನಾಡಿ ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್‌ನಲ್ಲಿ ಎಂಬ್ರಾಡರಿ, ಬ್ರೈಡಲ್ ವೇರ್, ಬ್ಲೌಸ್ ಸ್ಟಿಚ್ಚಿಂಗ್, ಗೌನ್ ಸ್ಟಿಚ್ಚಿಂಗ್, ಹಾಗೂ ಕಿಡ್ಸ್ ಡ್ರೆಸ್ಸ ಸ್ಟಿಚ್ಚಿಂಗ್ ಮಾಡಿಕೊಡಲಾಗುವುದು ಎಂದು ಹೇಳಿದರು.