ನಂದಕುಮಾರ್ ಅಭಿಮಾನಿ ಬಳಗದಿಂದ ಎ.9ರಂದು ನಿಂತಿಕಲ್’ನಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ
ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಂದಕುಮಾರ್ ರವರಿಗೆ ಅವಕಾಶ ವಂಚಿತವಾಗಿದೆ ಎಂದು ಆರೋಪಿಸಿ ನಂದಕುಮಾರ್ ಅಭಿಮಾನಿ ಬಳಗದ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಸಮಾವೇಶಕ್ಕೆ ಸಜ್ಜಾಗುತ್ತಿದೆ ಎಂದು ತಿಳಿದು ಬಂದಿದೆ.
ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ಎ.9ರಂದು ಸಮಾವೇಶವನ್ನು ನಡೆಸಲು ಕಡಬದಲ್ಲಿ ನಡೆದ ಅಭಿಮಾನಿ ಬಳಗದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ನಂದಕುಮಾರ್ ರವರಿಗೆ ಟಿಕೆಟ್ ಮತ್ತು ಬಿ ಫಾರಂ ನೀಡಬೇಕು,ಸುಳ್ಯದಲ್ಲಿ ಕಾಂಗ್ರೆಸ್ ವಿಜಯ ಗಳಿಸಬೇಕು,ಮತ್ತು ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಂಗ್ರೆಸ್ ಗೆಲುವಿನ ಮೂಲಕ ನ್ಯಾಯ ದೊರಕಿಸಬೇಕು ಎಂಬಿತ್ಯಾದಿ ಆಶಯಗಳನ್ನು ಸಮಾವೇಶದ ಮೂಲಕ ನಾಯಕರಲ್ಲಿ ಆಗ್ರಹಿಸಲಾಗುತ್ತದೆ.
ಒಂದು ವೇಳೆ ನಂದಕುಮಾರ್ ರವರಿಗೆ ಬಿ ಫಾರಂ ಕೈ ತಪ್ಪಿದ್ದಲ್ಲಿ ಕಾರ್ಯಕರ್ತರ ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳುವ ಸಮಾವೇಶದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಅಭಿಮಾನಿ ಕಾರ್ಯಕರ್ತರ ಬ್ರಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಬಳ್ಳೇರಿ, ಗಣೇಶ್ ಕೈಕುರೆ, ವಿಜಯಕುಮಾರ್ ಶೆಟ್ಟಿ, ಮಾಜಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಪ್ರವೀಣ್ ಕೆಡೆಂಜಿಗುತ್ತು, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಆಶಾ ಲಕ್ಷ್ಮಣ, ಸಚಿನ್ ರಾಜ್ ಶೆಟ್ಟಿ ರಾಮಕೃಷ್ಣ ಹೊಲ್ಲಾರ,ಗೋಕುಲ್ ದಾಸ್ ಸುಳ್ಯ, ಭವಾನಿಶಂಕರ್ ಕಲ್ಮಡ್ಕ, ಶಶಿಧರ್ ಎಂ ಜೆ, ಶೋಭಿತ್ ನಾಯರ್, ಗೋಪಾಲ ಕೃಷ್ಣ ಭಟ್, ರವೀಂದ್ರ ಕುಮಾರ್ ರುದ್ರಪಾದ, ಸಧೀರ್ ದೇವಾಡಿಗ, ಮಹಮ್ಮದ್ ಪೈಜಲ್, ಜಗನ್ನಾಥ ಪೂಜಾರಿ ಪೆರುವಾಜೆ, ಮಹಮ್ಮದ್ ಇಕ್ಫಾಲ್ ಮೊದಲಾದವರು ಉಪಸ್ಥಿತರಿದ್ದರು.