ಪುತ್ತೂರಿನಲ್ಲಿ ಎಸ್.ವೈ.ಎಸ್ ದ.ಕ ಈಸ್ಟ್ ಅಲ್ ಅರ್ಖಮಿಯ್ಯ ಪ್ರತಿನಿಧಿ ಸಮಾವೇಶ
ಪುತ್ತೂರು: ಕರ್ನಾಟಕದಲ್ಲಿ ಎಸ್‌ವೈಎಸ್ ಮೂವತ್ತನೇ ವಾರ್ಷಿಕ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ‘ಅಲ್ ಅರ್ಖಮಿಯ್ಯ-23’ ಎನ್ನುವ ಹೆಸರಿನಲ್ಲಿ ಒಂದು ದಿನದ ವಿಶೇಷ ಕ್ಯಾಂಪ್ ಪುತ್ತೂರು ಪುರಭವನದಲ್ಲಿ ಸೆ.2ರಂದು ನಡೆಯಿತು.
ಕಿಲ್ಲೆ ಮೈದಾನದಲ್ಲಿ ಅಳವಡಿಸಲಾಗಿದ್ದ ಮೂವತ್ತು ಧ್ವಜಸ್ಥಂಭಗಳಲ್ಲಿ ಬೆಳಗ್ಗೆ ಏಕಕಾಲದಲ್ಲಿ ಧ್ವಜಾರೋಹಣ ನಡೆಯಿತು. ಉಲಮಾ, ಉಮರಾ ಪ್ರಮುಖರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಯ ವರೆಗೆ ಅತ್ಯಂತ ಶಿಸ್ತು ಬದ್ದವಾಗಿ ನಡೆಯಿತು.
ತ್ವಾಹಿರ್ ಸಖಾಫಿ ಮಂಜೇರಿ ಅವರು ‘ಪರಂಪರೆಯ ಪ್ರತಿನಿಧಿಗಳಾಗೋಣ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಮರ್ಕಝ್ ನಾಲೆಡ್ಜ್ ಸಿಟಿಯ ಡಾ.ಸಯ್ಯಿದ್ ಸೈಫುದ್ದೀನ್ ಅವರು ‘ಹೆಲ್ತ್ ಕೋರ್ಟ್’ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಮರ್ಕಝ್ ಕಾರಂದೂರು ಇಲ್ಲಿನ ಮರ್ಝೂಕ್ ಸಅದಿ ‘ಅವರು ನವ ತಲೆಮಾರಿನ ಎಸ್.ವೈಎಸ್’ ಎನ್ನುವ ವಿಷಯದಲ್ಲಿ ತರಗತಿ ನಡೆಸಿದರು. ನಂತರ ಯುನಿಫಾರ್ಮ್ ಸಿವಿಲ್ ಕೋಡ್ ಎನ್ನುವ ವಿಷಯದಲ್ಲಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹಾಗೂ ಎ.ಕೆ ನಂದಾವರ ಅವರು ಡಿಬೇಟ್ ನಡೆಸಿದರು.
ವಿದ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ನಡೆಸಿದರು. ಸಯ್ಯದ್ ಸಾದತ್ ತಂಙಳ್ ಕರ್ವೇಲು ದುವಾ ಮಾಡಿದರು. ವೇದಿಕೆಯಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಧ್ಯಾಹ್ನದ ವೇಳೆಗೆ ಆಗಮಿಸಿ ಶುಭ ಹಾರೈಸಿ ಮಾತನಾಡಿದರು. ಶಾಸಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಎಸ್‌ವೈಎಸ್ ವತಿಯಿಂದ 6 ವ್ಹೀಲ್ ಚೆಯರ್ ವಿತರಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು.