ಮಕ್ಕಾ ಯಾತ್ರೆ ಮುಗಿಸಿ ಬಂದ ನಟಿ ರಾಖಿ ಸಾವಂತ್: ಇನ್ಮುಂದೆ ನನ್ನನ್ನು ಫಾತಿಮಾ ಎಂದು ಕರೆಯಿರಿ
ನಟಿ ರಾಖಿ ಸಾವಂತ್ ಮಕ್ಕಾದ ಯಾತ್ರೆ ಕೈಗೊಂಡು ಮುಂಬೈಗೆ ಮರಳಿದ್ದು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಭವ್ಯ ಸ್ವಾಗತವನ್ನು ಪಡೆದರು.
ವಿಚ್ಛೇದಿತ ಪತಿ ಆದಿಲ್ ಜತೆಗಿನ ಜಗಳ ಚರ್ಚೆಯಾಗಿರುವ ವೇಳೆ ಮಾಜಿ ಬಿಗ್ ಬಾಸ್ ಸ್ಪರ್ಧಿ ರಾಖಿ ಸಾವಂತ್ ಸೌದಿ ಅರೇಬಿಯಾಕ್ಕೆ ಕೆಲವು ಸ್ನೇಹಿತರೊಂದಿಗೆ ಯಾತ್ರೆಗೆ ತೆರಳಿದ್ದರು.
ಬಿಳಿ ಬಣ್ಣದ ಬುರ್ಖಾ ಧರಿಸಿದ್ದ ಅವರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ, ಸುತ್ತಲೂ ನೆರೆದಿದ್ದವರಿಗೆ ಇನ್ಮುಂದೆ ನನ್ನನ್ನು “ರಾಖಿ ಅಲ್ಲ, ನನ್ನನ್ನು ಫಾತಿಮಾ ಎಂದು ಕರೆಯಿರಿ (ರಾಖಿ ನಹಿ, ಫಾತಿಮಾ ಬೋಲೋ)” ಎಂದು ಹೇಳಿದರು. ಒಬ್ಬಾತ ಆಕೆಯ ಕೊರಳಿಗೆ ಹಾರವನ್ನು ಹಾಕಲು ಪ್ರಯತ್ನಿಸಿದ. ಆದರೆ ರಾಖಿ ಅವನ ಕೈಯಿಂದ ಹಾರವನ್ನು ತೆಗೆದುಕೊಂಡರು.
ಜೈಲಿನಿಂದ ಹೊರಬಂದ ನಂತರ ರಾಖಿ ಸಾವಂತ್ ಮತ್ತು ಆಕೆಯ ಮಾಜಿ ಪತಿ ಆದಿಲ್ ನಡುವೆ ಮಾತಿನ ಚಕಮಕಿ ನಡೆದಿದೆ. ರಾಖಿ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.