ಕರಾವಳಿ

ನೆಕ್ಕಿಲಾಡಿ ಆದರ್ಶನಗರ ಜನತಾ ಕಾಲನಿಗೆ ಶಾಸಕರ ಭೇಟಿ:
ರಸ್ತೆ ಸಮಸ್ಯೆ ಪರಿಹರಿಸುವಂತೆ ಕಾಲನಿ ನಿವಾಸಿಗಳ ಮನವಿ


ಪುತ್ತೂರು: ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಆದರ್ಶನಗರ ಜನತಾ ಕಾಲನಿಗೆ ಶಾಸಕರಾದ ಅಶೋಕ್ ರೈಯವರು ಭೇಟಿ ನೀಡಿ ಕಾಲನಿಯ ಜನರ ಸಮಸ್ಯೆಗಳನ್ನು ಆಲಿಸಿದರು. ಕಾಲನಿಗೆ ತೆರಳುವ ರಸ್ತೆಯ ಸಮಸ್ಯೆ ಮತ್ತು ಅಲ್ಲಿರುವ ಅಂಗನವಾಡಿಗೆ ತೆರಳುವ ದಾರಿ ಸಮಸ್ಯೆಯ ಬಗ್ಗೆ ಶಾಸಕರಲ್ಲಿ ತಿಳಿಸಿದ ಕಾಲನಿ ನಿವಾಸಿಗಳು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.


ಈ ಸಂಧರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಬ್ಲಾಕ್ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಹಿರಿಯ ಮುಖಂಡ ಡಾ. ರಘು ಬೆಳ್ಳಿಪ್ಪಾಡಿ, ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿಮಿನೇಜಸ್, ಕಾಂಗ್ರೆಸ್ ಕಾರ್ಯಕರ್ತರಾದ ಅಬ್ದುಲ್ ಖಾದರ್, ಇಸಾಕ್, ಹಮೀದ್, ಯಾಹ್ಯಾ, ಪ್ರಕಾಶ್, ಬಶೀರ್, ಅಝೀಝ್, ತಾಹಿರಾ, ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!