ಕರಾವಳಿ

ಎಸ್ ಬಿ ಎಸ್ ವಿಟ್ಲ ವಲಯ ಸಮಿತಿಯ ಮಹಾಸಭೆ: ಅಧ್ಯಕ್ಷರಾಗಿ ಅಶ್ರಫ್ ಕಾಂತಡ್ಕ ಪ್ರಧಾನ ಕಾರ್ಯದರ್ಶಿಯಾಗಿ ರಫನ್ ಶಾಂತಿನಗರ ಕೋಶಾಧಿಕಾರಿ ಸಲ್ಮಾನ್ ಫಾರಿಸ್



ವಿಟ್ಲ: ಸುನ್ನಿ ಜಮಿಯ್ಯತುಲ್ ಮುಅಲ್ಲಿಮೀನ್ ವಿಟ್ಲ ರೇಂಜ್ ಇದರ ಮಿಷನರಿ ವಿಭಾಗದ ನೇತೃತ್ವದಲ್ಲಿ ಎಸ್ ಬಿ ಎಸ್ ವಿಟ್ಲ ವಲಯ ಸಮಿತಿಯ ಮಹಾಸಭೆಯು ಮಂಗಳಪದವು ಮದರಸ ಹಾಲ್ ನಲ್ಲಿ ಅಗಸ್ಟ್ 6 ನಡೆಯಿತು. ವಿಟ್ಲ ರೇಂಜ್ ಮಿಷನರಿ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಮದನಿ ಶಾಂತಿನಗರ ಸ್ವಾಗತಿಸಿದರು. ವಿಟ್ಲ ರೇಂಜ್ ಅಧ್ಯಕ್ಷರಾದ ಶರೀಫ್ ಮದನಿ ಪೆರುವಾಯಿರವರು ದುವಾ ನೆರವೇರಿಸಿದರು.


ವಿಟ್ಲ ರೇಂಜ್ ಮಿಷನರಿ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಅಹ್ಸನಿ ಒಕ್ಕೆತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಎಸ್‌ಬಿಎಸ್‌ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗುವ ಮೂಲಕ ಅಹ್ಲುಸುನ್ನತ್ ವಲ್ ಜಮಾತಿನ ಆದರ್ಶವನ್ನು ಹಿಂಬಾಲಿಸಿ ಉತ್ತಮ ಮಕ್ಕಳಾಗಿ ಪ್ರತಿಭಾವಂತರಾಗಿ ಉತ್ತಮವಾದ ವಿದ್ಯೆಯನ್ನು ಪಡೆಯುವ ಸಮಾಜದಲ್ಲಿ ವಿದ್ಯಾವಂತರಾಗಿ ಜೀವಿಸಿ ಎಂದು ಮಂಗಳಪದವು ಖತೀಬ್ ಉಸ್ತಾದ್ ಉಸ್ಮಾನ್ ಸಖಾಫಿ ಬಾಲೆಪುಣೆರವರು ಮಕ್ಕಳಿಗೆ ಹಿತನುಡಿದರು.


ನಂತರ 2023-24 ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಶ್ರಫ್ ಕಾಂತಡ್ಕ ಪ್ರಧಾನ ಕಾರ್ಯದರ್ಶಿಯಾಗಿ ರಫನ್ ಶಾಂತಿನಗರ ಕೋಶಾಧಿಕಾರಿಯಾಗಿ ಸಲ್ಮಾನ್ ಪಾರಿಸ್ ಒಕ್ಕೆತ್ತೂರು ಉಪಾಧ್ಯಕ್ಷರಾಗಿ ಸೈಸುದ್ದೀನ್ ಟಿಪ್ಪುನಗರ, ಮುಹಮ್ಮದ್ ಅಜ್ಮಲ್ ಕೊಡುಂಗಾಯಿ ಕಾರ್ಯದರ್ಶಿಗಳಾಗಿ ಮುಹಮ್ಮದ್ ಹರ್ಷಲ್ ಮಂಜ, ಮುಹಮ್ಮದ್ ಶಫೀಕ್ ಕಂಬಳಬೆಟ್ಟು ಮುದಬ್ಬಿರಾಗಿ ಇರ್ಫಾದ್ ಕುಡ್ತಮುಗೆರು ಆಯ್ಕೆಯಾದರು.

ಕಾರ್ಯಕಾರಿಣಿ ಸದಸ್ಯರಾಗಿ ಮುಹಮ್ಮದ್ ಫವಾಜ್ ಕುಂಡಡ್ಕ, ಅಝೀಮ್ ಮಂಗಳಪದವು, ಮುಯ್ಯಿನುದ್ದೀನ್ ಚಂದಳಿಗೆ, ಮುಹಮ್ಮದ್ ರಾಝಿ ಪೆರುವಾಯಿ, ಮುಹಮ್ಮದ್ ಸ್ವಾಲಿಹಿ ಓಣಿಬಾಗಿಲು, ಮುಹಮ್ಮದ್ ಶಾಮಿಲ್ ಕೊಳಂಬೆ, ಮುಹಮ್ಮದ್ ಆಶಿಕ್ ಪೆಲ್ತಡ್ಕ, ಆಯ್ಕೆಯಾದರು.

ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಶುಭ ಹಾರೈಸಿದರು ಎಸ್ಎಂಎ ವಿಟ್ಲ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ಹಕೀಮ್ ಶಾಂತಿನಗರ, ಎಸ್ ಜೆ ಎಂ ವಿಟ್ಲ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪುರ್ಕಾಣಿ, ಮಹಮ್ಮದ್ ಹನೀಫ್ ಸಖಾಫಿ ಕಂಬಳಬೆಟ್ಟು, ಅಬೂಬಕ್ಕರ್ ಸಖಾಫಿ ಮಂಗಳಪದವು, ಇಸ್ಮಾಯಿಲ್ ಸಖಾಫಿ ಕುಂಡಡ್ಕ, ನೌಫಲ್ ಸಖಾಫಿ ಕೊಡಂಗೆ, ಹುಸೈನ್ ಸಅದಿ ನೆಲ್ಲಿಗುಡ್ಡೆ, ಮುಹಮ್ಮದ್ ಹನೀಫ್ ಝೈನಿ ಕುಡ್ತಮುಗೆರು, ಅಶ್ರಫ್ ಸಖಾಫಿ ಕಾಂತಡ್ಕ, ಅಬ್ಬಾಸ್ ಮದನಿ ಚಂದಳಿಕೆ, ಶಾಕಿರ್ ಸಖಾಫಿ ಪೆಲ್ತಡ್ಕ, ರವೂಫ್ ಹಾಶಿಮಿ ಬುಲೇರಿಕಟ್ಟೆ ಮಂಜ, ಹನೀಫ್ ಸಅದಿ ಕಂಬಳಬೆಟ್ಟು, ಅಬ್ದುಲ್ ಖಾದರ್ ಸಅದಿ ಕೊಡಂಗೆ, ಅಬ್ದುಲ್ ರಹಮಾನ್ ಹುಮೈದಿ ಪೆರುವಾಯಿ ಉಪಸ್ಥಿತರಿದ್ದರು. ವಿಟ್ಲ ರೇಂಜ್ ಪರೀಕ್ಷಾ ವಿಭಾಗದ ಕಾರ್ಯದರ್ಶಿ ಸ್ವಾದಿಕ್ ಸಖಾಫಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!