ಉಪ್ಪಿನಂಗಡಿ: ಮದುವೆ ಸಮಾರಂಭದಲ್ಲೂ ಗೃಹಲಕ್ಷ್ಮಿ ಯೋಜನೆಯ ಸದ್ದು
ಇಂದು ಕರ್ನಾಟಕ ರಾಜ್ಯ್ಯಾದ್ಯಂತ ಸದ್ದು ಮಾಡಿದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದ ಕಾರ್ಯಕ್ರಮ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಗಾಣಿಗ ಸಮುದಾಯ ಭವನದಲ್ಲಿ ನಡೆದ ಒಂದು ವಿವಾಹ ಸಮಾರಂಭದಲ್ಲಿಯೂ ಕಲರವ ಮೂಡಿಸಿದೆ.

ಉಪ್ಪಿನಂಗಡಿಯ ಸ್ಥಳೀಯ ನಿವಾಸಿಗಳಾದ ವಧು ರಾಜೇಶ್ವರಿ ಮತ್ತು ವರ ವಿಶ್ವ ಎಂಬುವವರ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕದ ಉಪಾಧ್ಯಕ್ಷ ಪ್ರಹ್ಲಾದ್ ಬೆಳ್ಳಿಪಾಡಿಯವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಮತ್ತು ವಧು ವರರಿಗೆ ಯೋಜನೆಯ ಫಲಕಗಳನ್ನು ನೀಡಿ ಫಲಾನುಭವಿಗಳಿಗೆ ಇದರಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು ಗಮನ ಸೆಳೆಯಿತು.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಇಂದು ಮದುವೆ ಸಮಾರಂಭದಲ್ಲಿಯೂ ಸದ್ದು ಮಾಡಿ ಸಂಭ್ರಮ ಮೂಡಿಸಿದೆ.