ಕರಾವಳಿಕ್ರೈಂ

ಉಪ್ಪಿನಂಗಡಿ: ಮೂರುಗೋಳಿಯಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನ,



ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಯ ಮೂರುಗೋಳಿ ಎಂಬಲ್ಲಿ ಕಾರ್ಯಾಚರಿಸುವ ವಕ್ರಾಂಗೀ ಸಂಸ್ಥೆಯ ಎಟಿಎಂ ಕೇಂದ್ರಕ್ಕೆ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಮಹಮ್ಮದ್ ಹರ್ಷದ್ ಎಂಬವರು ನಿರ್ವಹಿಸುತ್ತಿರುವ ಈ ಎಟಿಎಂ ಕೇಂದ್ರಕ್ಕೆ ಸೋಮವಾರ ತಡ ರಾತ್ರಿ ನುಗ್ಗಿದ ಕಳ್ಳರು ಎಟಿಎಂ ಮಿಶಿನ್ ನ ಒಂದು ಬಾಗಿಲನ್ನು ಮುರಿದು ಸೇಫ್ ಡೋರ್ ನ ಲಾಕನ್ನು ಮುರಿಯಲು ಪ್ರಯತ್ನಿಸಿದ್ದು ಬಾಗಿಲು ಜಖಂಗೊಂಡಿದೆ.

ಎಟಿಎಂ ಕೇಂದ್ರದಲ್ಲಿ ಇದೆ ಎನ್ನಲಾದ ನಗದು ಮೊತ್ತ ಕಳ್ಳರ ಪಾಲಾಗಿದೆಯೋ ಅಥವ ಸುರಕ್ಷಿತವಾಗಿದೆಯೋ ಎನ್ನುವುದು ಎಟಿಎಂ ಮೆಷಿನ್ ತೆರೆಯಲು ತಂತ್ರಜ್ಞರ ಆಗಮನದ ಬಳಿಕವೇ ತಿಳಿಯಬೇಕಾಗಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!