ಕ್ರೈಂವಿಜ್ಞಾನ

ವಾಂತಿ ಮಾಡಲೆಂದು ಬಸ್ಸಿನ ಹೊರಗೆ ತಲೆ ಹಾಕಿದ ಮಹಿಳೆ: ಮತ್ತೊಂದು ವಾಹನ ತಲೆಗೆ ಬಡಿದು ಮಹಿಳೆ ದಾರುಣ ಸಾವು



ಎರಡು ವಾಹನಗಳ ನಡುವೆ ಮಹಿಳೆಯ ತಲೆ ಸಿಲುಕಿದ ಪರಿಣಾಮ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮಹಿಳೆ ವಾಂತಿ ಬಂತೆಂದು ತಲೆ ಹೊರ ಹಾಕಿದಾಗ ಬಸ್ಸಿನ ಬಂದ ಮತ್ತೊಂದು ವಾಹನ ತಲೆಗೆ ಹೊಡೆದಿದ್ದು ತಲೆ ನಗುಜ್ಜಾಗಿತ್ತು.

ಹರಿಯಾಣ ರೋಡ್‌ವೇಸ್ ಬಸ್‌ಗೆ ಸೇರಿದ ಘಟನೆ ಅಲಿಪುರ ಪ್ರದೇಶದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ಪ್ರತಾಪ್‌ಗಢದಿಂದ ಬಂದಿದ್ದ ಬಾಬ್ಲಿ, ಕಾಶ್ಮೀರ್ ಗೇಟ್‌ನಿಂದ ಲುಧಿಯಾನಕ್ಕೆ ಬಸ್‌ ಏರಿದ್ದರು.

ಇನ್ನೊಂದು ವಾಹನ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದಾದ ಸಂದರ್ಭದಲ್ಲೇ  ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ತಲೆ ಹಾಕಿದ್ದರು. ಆ ಸಂದರ್ಭದಲ್ಲಿ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!