ಕರಾವಳಿ

ದಿವ್ಯಪ್ರಭಾ ಗೌಡರಲ್ಲಿ  ಬಡವರ ಪರವಾದ ಕಾಳಜಿ ಇದೆ-ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ 

ಪುತ್ತೂರು: ದಿವ್ಯಪ್ರಭಾ ಗೌಡ ಅವರಲ್ಲಿ ಬಡವರ ಪರವಾದ ಕಾಳಜಿ ಇದೆ. ಬಡವರ ಪರವಾಗಿ ಕೆಲಸ ಮಾಡುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹೇಳಿದರು. ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ಗಾಂಧಿಕಟ್ಟೆಯಲ್ಲಿ ನ.1ರಂದು ನಡೆದ ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡವರಿಗೆ, ಅಶಕ್ತರಿಗೆ, ನೊಂದವರಿಗೆ ಸಹಾಯ ಮಾಡಬೇಕೆಂದು ಎಲ್ಲ ಧರ್ಮಗಳು ಹೇಳುತ್ತದೆ. ಆದರೆ ಅದನ್ನು ಪಾಲಿಸುವವರು ಮಾತ್ರ ಕಡಿಮೆ. ಈಗ ಏನಿದ್ದರೂ ಸ್ವಂತದ್ದರ ಬಗ್ಗೆ ಚಿಂತೆ ಮಾತ್ರ. ಕಷ್ಟದಲ್ಲಿರುವರಿಗೆ ಸಹಾಯ ಮಾಡುವವರು ಕಡಿಮೆ. 500 ರೂಪಾಯಿ ಸಹಾಯ ಮಾಡಿದರೆ ಅದನ್ನು ಪೇಪರಲ್ಲಿ ದೊಡ್ಡದಾಗಿ ಪ್ರಚಾರ ಮಾಡುವವರೂ ಇದ್ದಾರೆ ಎಂದ ಜಗದೀಶ್ ಶೆಟ್ಟಿಯವರು ಆಟೋ ಚಾಲಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ದಿವ್ಯ ಪ್ರಭಾ ನೇತೃತ್ವದ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಸಂಚಾಲಕಿ ದಿವ್ಯಪ್ರಭಾ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್, ಆಟೋ ರಿಕ್ಷಾ ಚಾಲಕರ ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್, ಆಟೋ ಚಾಲಕ ಸತೀಶ್ ಪ್ರಭು ಮಾತನಾಡಿದರು. ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮಾಧವ ಗೌಡ, ಮೋಹನ ಗುರ್ಜಿನಡ್ಕ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೊಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಶ ಸಹಾಯವಾಣಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More
ಕರಾವಳಿ

ಪುತ್ತೂರು: KSRTC ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ‘ಬ್ರ್ಯಾಂಡ್ ಬ್ಯಾಗ್’ ಶುಭಾರಂಭ

ಪುತ್ತೂರು: ವಿವಿಧ ರೀತಿಯ ಬ್ಯಾಗ್‌ಗಳನ್ನೊಳಗೊಂಡ ‘ಬ್ರ್ಯಾಂಡ್ ಬ್ಯಾಗ್’ ನೂತನ ಮಳಿಗೆ ಅ.31ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ‘ಫ್ಯಾನ್ಸಿ ಪೀಪಲ್’ ಸಮೀಪ ಶುಭಾರಂಭಗೊಂಡಿತು. ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ ದುವಾಶೀರ್ವಚನ ನೀಡಿ ಶುಭ ಹಾರೈಸಿದರು. ಧಾರ್ಮಿಕ ಪಂಡಿತರಾದ ಮಹಮೂದುಲ್ ಫೈಝಿ ಓಲೆಮುಂಡೋವು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಹನೀಫ್ ಪುಣ್ಚತ್ತಾರ್, ಶಂಸುದ್ದೀನ್ ಅಜ್ಜಿನಡ್ಕ, ಗಂಗಾಧರ ಶೆಟ್ಟಿ ಎಲಿಕ, ಶಾನವಾಝ್ ಬಪ್ಪಳಿಗೆ, ಗಗನ್ ಕಾವು, ಕರೀಂ ಗೇರುಕಟ್ಟೆ ಮತ್ತಿತರ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.  ಮೊಯ್ದುಕುಂಞಿ, ಕಬೀರ್, ನಿಝಾರ್, ಶಾಕಿರ್ ಮುಂಡೂರು, ರಹೀಂ ಪಂಜಳ, ಖಾಸಿಂ ಮರೀಲ್, ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಬ್ರ್ಯಾಂಡ್ ಬ್ಯಾಗ್ ಮಳಿಗೆಯ ಮಾಲಕ ಶಮೀರ್ ಮಾತನಾಡಿ ನಮ್ಮಲ್ಲಿ ವಿವಿಧ ಬಗೆಯ ವೆರೈಟಿ ಬ್ಯಾಗ್‌ಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

Read More
ಕರಾವಳಿ

ಬೆಳ್ತಂಗಡಿ: ಕೆರೆಗೆ ಹಾರಿ ಆತ್ಮಹತ್ಯೆ

ಉರುವಾಲು: ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಅಮ್ಮಂಗೆ ಎಂಬಲ್ಲಿ ವೃದ್ಧೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.1ರಂದು ನಡೆದಿದೆ. ಅಮ್ಮಂಗೆ ನಿವಾಸಿ ಜಾನಕಿ ಎಂದು ತಿಳಿದುಬಂದಿದೆ.

Read More
ಕ್ರೈಂರಾಜ್ಯ

ಹಾಸ್ಟೆಲ್’ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಅರಕಲಗೂಡು: ವಿದ್ಯಾರ್ಥಿಯೋರ್ವ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ತಾಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನವನದ ಪಕ್ಕದಲ್ಲಿರುವ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ 9ನೇ ತರಗತಿ

Read More
ರಾಷ್ಟ್ರೀಯ

ಬಹುಭಾಷಾ ನಟಿ ರಂಭಾ ಕಾರು ಅಪಘಾತ

ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಕೆನಡಾದಲ್ಲಿ ಅಪಘಾತವಾಗಿದ್ದು, ರಂಭಾ ಮತ್ತು ಪುತ್ರಿಯರು ಅಪಾಯದಿಂದ ಪರಾಗಿದ್ದಾರೆ. ಘಟನೆಯಲ್ಲಿ ರಂಭಾ ಹಾಗೂ ಹಿರಿಯ ಪುತ್ರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

Read More
ಕರಾವಳಿ

ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ದಿನಾಂಕ ಪ್ರಕಟ

ಪುತ್ತೂರು: ಕೇರಳ ಕರ್ನಾಟಕ ಗಡಿ ಪ್ರದೇಶದ ಪ್ರಸಿದ್ಧ ಝಿಯಾರತ್ ಕೇಂದ್ರವಾಗಿರುವ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಸಮಾರಂಭ 2023 ಫೆಬ್ರವರಿ 3ರಿಂದ ಫೆಬ್ರವರಿ 12ರ ಸಂಜೆ ವರೆಗೆ

Read More
Uncategorizedಕರಾವಳಿ

ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಎಸ್ ಕೆ ಎಸ್ ಎಸ್ ಎಫ್ ಕಾರ್ಯಕ್ರಮ ಪೂರಕ -ನೂರುದ್ದೀನ್ ಸಾಲ್ಮರ

ಎಸ್ ಕೆ ಎಸ್ ಎಸ್ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ, ಮಾದಕ ದ್ರವ್ಯದ ವಿರುದ್ಧ ಜನಜಾಗೃತಿಯನ್ನು ಮೂಡಿಸಲು ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮನ್ನು,ಎಸ್ ಕೆ

Read More
ರಾಷ್ಟ್ರೀಯ

ದೆಹಲಿ ಪಾದರಕ್ಷೆ ತಯಾರಿಕೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಇಬ್ಬರು ಸಾವು

ನವದೆಹಲಿ: ದೆಹಲಿಯ ನರೆಲಾ ಕೈಗಾರಿಕಾ ಪ್ರದೇಶದಲ್ಲಿರುವ ಪಾದರಕ್ಷೆ ತಯಾರಿಕೆ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿರುವ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More
ಕರಾವಳಿ

ಇತಿಹಾಸ ಪ್ರಸಿದ್ಧ ಬೈತಡ್ಕ ದರ್ಗಾ ಶರೀಫ್ ಉರೂಸ್ ದಿನಾಂಕ ಪ್ರಕಟ

ಪುತ್ತೂರು: ಇತಿಹಾಸ ಪ್ರಸಿದ್ಧ ಬೈತಡ್ಕ ವಲಿಯುಲ್ಲಾಹಿ ಮಶ್ಹೂರ್ ರವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉದಯಸ್ತಮಾನ ಉರೂಸ್ ಸಮಾರಂಭದ ದಿನಾಂಕ ನಿಗದಿಯಾಗಿದ್ದು2023 ಫೆಬ್ರವರಿ 10ರಿಂದಫೆಬ್ರವರಿ 19ರ

Read More
ರಾಜ್ಯ

ಬೆಳಗಾವಿ ಪ್ರವೇಶಿಸಲು ಯತ್ನ: ಶಿವಸೇನೆಯ ಕಾರ್ಯಕರ್ತರನ್ನು ತಡೆದ ಪೊಲೀಸರು

ಕನ್ನಡ ರಾಜ್ಯೋತ್ಸವ ದಿನವಾದ ನ.1ರಂದು ಬೆಳಗಾವಿ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಕಾರ್ಯಕರ್ತರನ್ನು ಸೋಮವಾರ ಕೊಗನೊಳಿ ಚೆಕ್ ಪೋಸ್ಟ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ

Read More
error: Content is protected !!