ಕರಾವಳಿ

ಪುತ್ತೂರು: KSRTC ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ‘ಬ್ರ್ಯಾಂಡ್ ಬ್ಯಾಗ್’ ಶುಭಾರಂಭ

ಪುತ್ತೂರು: ವಿವಿಧ ರೀತಿಯ ಬ್ಯಾಗ್‌ಗಳನ್ನೊಳಗೊಂಡ ‘ಬ್ರ್ಯಾಂಡ್ ಬ್ಯಾಗ್’ ನೂತನ ಮಳಿಗೆ ಅ.31ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ‘ಫ್ಯಾನ್ಸಿ ಪೀಪಲ್’ ಸಮೀಪ ಶುಭಾರಂಭಗೊಂಡಿತು.

ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ ದುವಾಶೀರ್ವಚನ ನೀಡಿ ಶುಭ ಹಾರೈಸಿದರು.

ಧಾರ್ಮಿಕ ಪಂಡಿತರಾದ ಮಹಮೂದುಲ್ ಫೈಝಿ ಓಲೆಮುಂಡೋವು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಹನೀಫ್ ಪುಣ್ಚತ್ತಾರ್, ಶಂಸುದ್ದೀನ್ ಅಜ್ಜಿನಡ್ಕ, ಗಂಗಾಧರ ಶೆಟ್ಟಿ ಎಲಿಕ, ಶಾನವಾಝ್ ಬಪ್ಪಳಿಗೆ, ಗಗನ್ ಕಾವು, ಕರೀಂ ಗೇರುಕಟ್ಟೆ ಮತ್ತಿತರ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.

 ಮೊಯ್ದುಕುಂಞಿ, ಕಬೀರ್, ನಿಝಾರ್, ಶಾಕಿರ್ ಮುಂಡೂರು, ರಹೀಂ ಪಂಜಳ, ಖಾಸಿಂ ಮರೀಲ್, ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಬ್ರ್ಯಾಂಡ್ ಬ್ಯಾಗ್ ಮಳಿಗೆಯ ಮಾಲಕ ಶಮೀರ್ ಮಾತನಾಡಿ ನಮ್ಮಲ್ಲಿ ವಿವಿಧ ಬಗೆಯ ವೆರೈಟಿ ಬ್ಯಾಗ್‌ಗಳು ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

Leave a Reply

Your email address will not be published. Required fields are marked *

error: Content is protected !!