ಲಕ್ಷಾಂತರ ರೂ. ಕಳ್ಳತನ ನಡೆಸಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು
ಪುತ್ತೂರು: ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಣ ಕಳವು ಮಾಡಿದ ಆರೋಪಿಯನ್ನು ಪುತ್ತೂರು ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಪುತ್ತೂರಿನ ಅಝರ್ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಲಾರಿಯಲ್ಲಿ ಕಂಡಕ್ಟರ್ ಆಗಿರುವ ಹಾವೇರಿ ಜಿಲ್ಲೆಯ ಸವಣೂರು ನಿವಾಸಿ ಶಿವಕುಮಾರ್ ಯಾನೆ ಶಿವು (2೦ವ) ಬಂಧಿತ ಆರೋಪಿ.
ಆರೋಪಿಯಿಂದ ಕಳವು ಮಾಡಿದ ರೂ.10 ಲಕ್ಷದ ಪೈಕಿ ರೂ.3 ಲಕ್ಷದ 70 ಸಾವಿರ ವಶ ಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ. ಪತ್ತೆ ಕಾರ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರವರ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನಿರ್ದೇಶನದಲ್ಲಿ ಪುತ್ತೂರು ವಿಭಾಗ ಡಿವೈಎಸ್ಪಿ ಗಾನಾ ಕುಮಾರ ರವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಠಾಣೆ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್. ಸಿ .ಸ್ಕರಿಯಾ, ಜಗದೀಶ್, ಪಿ.ಸಿ. ಭೀಮಸೇನ ,
ಕಿರಣ್ ಕುಮಾರ್ ,ವಿನಾಯಕ ಮತ್ತು ಸಿ.ಡಿ.ಆರ್ ವಿಭಾಗದ ಸಂಪತ್ ,ದಿವಾಕರ ರವರುಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.