ನರಿಮೊಗರು: ಹೃದಯಾಘಾತದಿಂದ ನವ ವಿವಾಹಿತ ಸಾವು: ಮೃತರ ಮನೆಗೆ ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ಭೇಟಿ-ಧನ ಸಹಾಯ
ಪುತ್ತೂರು: ನರಿಮೊಗರು ಗ್ರಾಮದ ಧರ್ಮನಗರ ನಿವಾಸಿ ಬೆಂಗಳೂರು ಗ್ಲೋಬಲ್ ಲಿಪ್ಟ್ ಸರ್ವಿಸ್ ಕಂಪೆನಿಯಲ್ಲಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸುರೇಶ್ (30 ವ) ಅವರು ಫೆ.19ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತ ಸುರೇಶ್ ಅವರು 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮೃತರು ತಂದೆ ಗುರುವಪ್ಪ ತಾಯಿ ಜಾನಕಿ ಸಹೋದರರಾದ ಸುರೇಂದ್ರ ಹಾಗೂ ಸಂದೇಶ್ ಅವರನ್ನು ಅಗಲಿದ್ದಾರೆ.
ನೇತ್ರ ದಾನ:
ಮೃತ ಸುರೇಶ್ ಅವರ ನೇತ್ರ ದಾನ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಅಶೋಕ್ ರೈ ಭೇಟಿ:
ಮೃತರ ಮನೆಗೆ ಕಾಂಗ್ರೆಸ್ ಮುಖಂಡ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಫೆ.21ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಧನ ಸಹಾಯ ನೀಡಿದರು.
ಇವರ ಜೊತೆಗೆ ಪುರುಷರಕಟ್ಟೆ ಕಾಂಗ್ರೆಸ್ ಬೂತ್ ಅಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಸ್ಠಳೀಯ ನಿವಾಸಿ ಯೋಗಿಶ್ ಮತ್ತು ಇತರರು ಉಪಸ್ಥಿತರಿದ್ದರು.