ಸುಳ್ಯ: ಪೈಪ್ ಒಡೆದು ನೀರು ಪೋಲಾಗುತ್ತಿದ್ದ ಸ್ಥಳಕ್ಕೆ ತಕ್ಷಣ ಧಾವಿಸಿ ದುರಸ್ಥಿಗೊಳಿಸಿದ ನ.ಪಂ ಅಧ್ಯಕ್ಷ
ಸುಳ್ಯ ಒಡೆದು ಹೋದ ನೀರಿನ ಪೈಪನ್ನು ನಗರ ಪಂಚಾಯತ್ ಅಧ್ಯಕ್ಷರೇ ದುರಸ್ಥಿ ಪಡಿಸಿ ನೀರು ಪೋಲಾಗುವುದನ್ನು ತಪ್ಪಿಸಿ ತಮ್ಮ ಜವಾಬ್ದಾರಿಯನ್ನು ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಳ್ಯ ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ನೀರಿನ ಪೈಪ್ ಒಡೆದು ಹೋಗಿ ನೀರು ಪೋಲಾಗುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ವಿನಯ ಕುಮಾರ್ ಕಂದಡ್ಕರವರು ದುರಸ್ಥಿಪಡಿಸುವ ಸಾಮಗ್ರಿಗಳನ್ನು ಬಳಸಿ ಗೇಟ್ ವಾಲ್ವ್ ಬಂದ್ ಮಾಡಿ ಹೆಚ್ಚಿನ ನೀರು ಪೋಲಾಗುವದನ್ನು ತಪ್ಪಿಸಿದ್ದಾರೆ.
ಅಧ್ಯಕ್ಷರ ಈ ಜವಾಬ್ದಾಯುತ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಕಾರಣವಾಗಿದೆ.