ಕಡಬದ ಯುವಕನ ಚಿಕಿತ್ಸೆಗೆ ರೂ.50 ಸಾವಿರ ಧನ ಸಹಾಯ ನೀಡಿ ಮಾದರಿಯಾದ ಮುಸ್ಲಿಂ ಸೆಂಟ್ರಲ್ ಕಮಿಟಿ
ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ ಸಮಾಜ ಸೇವಕ ನಾಸಿರ್ ಎಂಬ ಯುವಕ ಎರಡು ಕಿಡ್ನಿ ವೈಫಲ್ಯ ದಿಂದ ಸಂಕಷ್ಟದಲ್ಲಿದ್ದು, ಕಿಡ್ನಿ ಜೋಡಣೆಗೆ ರೂ 40 ಲಕ್ಷ ವೆಚ್ಚ ತಗಲಲಿದ್ದು ಧನಸಹಾಯ ನೀಡುವಂತೆ ದ ಕ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್ ಸಂಶುದ್ದೀನ್ ಸುಳ್ಯ ಇವರ ಮೂಲಕ ಮನವಿ ಸಲ್ಲಿಸಲಾಗಿತ್ತು.
ಮನವಿಯನ್ನು ಪುರಸ್ಕರಿಸಿದ
ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಅಲ್ ಹಾಜ್ ಕೆ. ಎಸ್ ಮಹಮ್ಮದ್ ಮಸೂದ್ ಮತ್ತು ಸಮಿತಿಯವರು ರೂ 50,000 ಮೊತ್ತದ ಚೆಕ್ಕನ್ನು ಮಂಗಳೂರಿನ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಾವಗಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಪಿ ಇಸಾಕ್ ಸಾಹೇಬ್ ಪಾಜಪ್ಪಳ್ಳ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸಮಾಜ ಜಿಲ್ಲಾ ಎಐಕೆಎಂಸಿಸಿ ಖಜಾಂಜಿ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್, ಸುಳ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ಸುಳ್ಯ ನಗರ ಪಂಚಾಯಿತಿ ಸದಸ್ಯ ಕೆ.ಎಸ್. ಉಮ್ಮರ್, ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಸೆಂಟ್ರಲ್ ಕಮಿಟಿ ಪದಾಧಿಕಾರಿಗಳಾದ ನೂರುದ್ದೀನ್ ಸಾಲ್ಮರ, ಇಬ್ರಾಹಿಂ ಕೋಡಿಚ್ಚಾಲ್, ಸಿ. ಎಂ. ಮುಸ್ತಫ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಫೂರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಕಡಬ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆದಮ್, ಆರ್ ಟಿ ಐ ಕಾರ್ಯಕರ್ತ ಹನೀಫ್ ಪಾಜಪ್ಪಲ್ಲ, ಕೆ. ಬಿ. ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು