ಸುಳ್ಯ: ಮನೆ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿಗೈದ ದುಷ್ಕರ್ಮಿಗಳು
ಸುಳ್ಯ ನಗರದ ಜಯನಗರದಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಭಾಗದ ಗಾಜನ್ನು ಯಾರೋ ದುಷ್ಕರ್ಮಿಗಳು ಪುಡಿಗೈದಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ ಎಂದು ತಿಳಿದುಬಂದಿದೆ.

ಜಯನಗರ ನಿವಾಸಿ ಸಾಹಿ ಎಂಬುವವರು ತಮ್ಮ ಮನೆಯ ಮುಂಭಾಗದಲ್ಲಿ ಎಂದಿನಂತೆ ತಮ್ಮ ಕ್ರೇಟಾ ಕಾರನ್ನು ನಿಲ್ಲಿಸಿದ್ದರು.
ಇಂದು ಮುಂಜಾನೆ ಎದ್ದು ಕಾರ್ ವಾಶ್ ಮಾಡಲು ಬಂದಾಗ ಕಾರಿನ ಹಿಂಭಾಗದ ಗಾಜು ಸಂಪೂರ್ಣವಾಗಿ ಪುಡಿಯಾಗಿರುವುದು ಕಂಡುಬಂದಿದೆ.
ಕಾರಿನ ಪಕ್ಕದಲ್ಲಿ ಕಲ್ಲೊಂದು ಕಂಡುಬಂದಿದ್ದು ಇದೇ ಕಲ್ಲಿನಿಂದ ಯಾರೋ ದುಷ್ಕರ್ಮಿಗಳು ಗಾಜನ್ನು ಪುಡಿ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಶಾಹಿ ರವರ ಮೇಲೆ ಸುಳ್ಯ ವೆಂಕಟರಮಣ ಸೊಸೈಟಿ ಬಳಿ ಗುಂಡಿನ ದಾಳಿ ನಡೆದು ಅಪಾಯದಿಂದ ಪಾರಾಗಿದ್ದರು.
