ಕಡಬ: ಬಸ್-ಕಾರು ಡಿಕ್ಕಿ; ಮಗು ಮೃತ್ಯು, ಐವರಿಗೆ ಗಂಭೀರ ಗಾಯ
ಕಡಬ: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಗು ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಫೆ.13ರಂದು ನಡೆದಿದೆ.

ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಹಾಗೂ ಕೆಎಸ್ಸಾರ್ಟಿಸಿ ವಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಸಮೀಪ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿಗೆ ಕರೆದೊಯ್ಯಲಾಗಿದೆ.