ಕುಂಬ್ರ: ಬದ್ರಿಯಾನಗರ ಬದ್ರಿಯಾ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಉಸ್ಮಾನ್
ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕುಂಬ್ರ ಆಯ್ಕೆ
ಪುತ್ತೂರು: ಕುಂಬ ಬದ್ರಿಯಾನಗರ ಬದ್ರಿಯಾ ಜಮಾತ್ ಕಮಿಟಿ ಇದರ ಮಹಾಸಭೆಯು ಜೂ.23 ರಂದು ಮಸೀದಿಯ ಸಭಾಂಗಣದಲ್ಲಿ ನಡೆಯಿತು.

ಗೌರವಾಧ್ಯಕ್ಷರಾದ ಕೆ.ಪಿ ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಮಗಿರೆ ವರದಿ ವಾಚಿಸಿದರು . ಖತೀಬ್ ಇಸ್ಮಾಯಿಲ್ ಸ ಅದಿ ದುವಾ ನೆರವೇರಿಸಿದರು. ಸಭೆಯಲ್ಲಿ ಜಮಾತ್ ಅಭಿವೃದ್ಧಿಯ ಬಗ್ಗೆ ಸದಸ್ಯರೊಳಗೆ ಚರ್ಚೆಗಳು ನಡೆದವು. ಸಭೆಯಲ್ಲಿ ಅಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರುಗಳಾದ ಯೂಸುಫ್ ಕಡ್ತಿಮಾರ್, ಹಮೀದ್ ದರ್ಬಾರ್, ಮೂಸಾ ಮುಸ್ಲಿಯಾರ್, ಮಾಜಿ ಕಾರ್ಯದರ್ಶಿ ಅರಬಿಕುಂಞಿ ಮಗಿರೆ,ಇಸ್ಮಾಯಿಲ್ ಕೋಳಿಗದ್ದೆ, ಮಹಮ್ಮದ್ ಮಗಿರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2023-24 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೆ ಪಿ ಅಹ್ಮದ್ ಹಾಜಿ ಆಕರ್ಷಣ್, ಅಧ್ಯಕ್ಷರಾಗಿ ಉಸ್ಮಾನ್ ಮುಸ್ಲಿಯಾರ್ ಶಾಂತಿನಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಿಕ್ ಕುಂಬ್ರ, ಕಾರ್ಯದರ್ಶಿಯಾಗಿ ಅಬ್ದುಲ್‌ರಹಿಮಾನ್ ಕೊಯಿಲ, ಉಪಾಧ್ಯಕ್ಷರಾಗಿ ಅಬ್ಬಾಸ್ ಬ್ರೆಂಚ್ ,ಹಾಗೂ ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಬದ್ರಿಯಾನಗರರನ್ನು ನೇಮಿಸಲಾಯಿತು.
ಕಾರ್ಯಕಾರಿ ಸಮಿತಿಗೆ ಸದಸ್ಯರುಗಳಾಗಿ ಯೂಸುಫ್ ಕಡ್ತಿಮಾರ್, ಅರಬಿಕುಂಞ ಮಗಿರೆ ಇಸುಬುಕೊಯಿಲ, ಹಮೀದ್ ಕೊಯಿಲ, ಇಸ್ಮಾಯಿಲ್ ಕೋಳಿಗದ್ದೆ, ಬಶೀರ್ ಕಡ್ತಿಮಾರ್, ಇಬ್ರಾಹಿಂ ಝಹುರಿ ಶಾಂತಿನಡಿ, ಆದಂ ಕುಂಞಿ ಅಡಿಲ್, ಮಹಮ್ಮದ್ ಮಗಿರೆ, ಸವಾದ್ ಬದ್ರಿಯಾನಗರ, ಪಳ್ಳಿಚ್ಚ ಕಡ್ತಿಮಾರ್, ಹಾಗೂ ಮೂಸಾ ಮುಸ್ಲಿಯಾರ್ ಶಾಂತಿನಡಿಯವರನ್ನು ಆಯ್ಕೆ ಮಾಡಲಾಯಿತು.