ಕರಾವಳಿಕ್ರೈಂ

ಅನುಮಾನಸ್ಪದ ರೀತಿಯಲ್ಲಿ ಅವಿವಾಹಿತ ಯುವಕನ ಮೃತದೇಹ ಪತ್ತೆ

ಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಜಾಗದಲ್ಲಿ ಅವಿವಾಹಿತ ಯುವಕನೊರ್ವ ಅನುಮಾನಸ್ಪದ ರೀತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.



ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪವಿರುವ ವಿದ್ಯುತ್ ಸಬ್ ಸ್ಟೇಷನ್ ಸಮೀಪ ಮುಂಭಾಗ  ಜು.1 ರಂದು ಮೃತದೇಹ ಪತ್ತೆಯಾಗಿದ್ದು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ ಅವರ ಪ್ರಥಮ ಪುತ್ರ ಮುಸ್ತಾಕ್ (27) ಮೃತ ಯುವಕ.

 



ಮೃತ ದುರ್ದೈವಿ ಚಾಲಕ ವೃತ್ತಿ ನಡೆಸುತ್ತಿದ್ದು ಜೂ. 30 ರಂದು ಕಲ್ಲೇರಿಯಿಂದ ಮದ್ದಡ್ಕಕ್ಕೆ ಮುಸ್ತಾಕ್ ನ್ನು ಲಾರಿ ಬಳಿಗೆ ಬೀಡಲೆಂದು ಆತನ ತಮ್ಮ ಮುನಾಸೀರ್ ಬೈಕ್ ನಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಆದರೆ ಇಂದು ಆತನ ಶವ ಪತ್ತೆಯಾದ ಸ್ಥಿತಿಯನ್ನು ಕಂಡು ಆತನ ತಂದೆ ಶರೀಫ್ ನನ್ನ ಮಗನನ್ನು ಕೊಲೆ ಮಾಡಿ ತಂದು ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ಸಿಕ್ಕ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಗಾರ್ಡ್ ಇಲ್ಲ ಎಂದು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ ಐ ಆನಂದ್, ಸೋಕೋ ತಂಡ, ಕುವೆಟ್ಟು ಗ್ರಾ. ಪಂ. ಪಿಡಿಓ ಇಮ್ತಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!