ಕರಾವಳಿಕ್ರೈಂ

ಬಂಟ್ವಾಳ: ಎಂಡಿಎಂಎ ಸಾಗಾಟ ಪತ್ತೆ; ಮೂವರು ಆರೋಪಿಗಳ ಬಂಧನ

ಆರೋಪಿಗಳು: ರಶೀದ್, ಸವಾದ್, ಝುಬೈರ್

ಬಂಟ್ವಾಳ: ಕಾರಿನಲ್ಲಿ ಮಾದಕವಸ್ತು ಎಂಡಿಎಂಎ ಸಾಗಾಟ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು 7,64,000 ರೂ. ಮೌಲ್ಯದ ಎಂಡಿಎಂಎ ಸ್ವಾಧೀನ ಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.


ಬಂಟ್ವಾಳ ಪುದು ನಿವಾಸಿ ಎ,ಜುಬೈರ್ (39), ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಂಟ್ವಾಳ ಬಿ ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 


ಅಂದಾಜು 7,64,000ರೂ. ಮೌಲ್ಯದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ ಮಾದಕದ್ರವ್ಯ ಹಾಗೂ ಮಾದಕ ವಸ್ತು ಸೇವನೆ ಮಾಡಲು ಉಪಯೋಗಿಸುವ ಸಾಧನ, 3 ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



ಜೂನ್ 4ರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿರವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಪ್ಲೈಒವರ್ ಬಳಿ ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿರುತ್ತಾರೆ. ಕಾರನ್ನು ಪರಿಶೀಲಿಸಿದಾಗ ಮನೋದ್ರೇಕಕಾರಿ ವಸ್ತು ಸೇವನೆ ಮಾಡಲು ಬಳಸುವ ಸಾಧನ ಕಂಡುಬಂದಿದೆ.

ಬಳಿಕ ಈ ಬಗ್ಗೆ ಅವರನ್ನು ವಿಚಾರಿಸಿದಾಗ, ತಾವುಗಳು ಎಂಡಿಎಂಎ ಎಂಬ ಮಾದಕದ್ರವ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ ಹಾಗೂ ಕಾರಿನಲ್ಲಿ ಎಂಡಿಎಂಎ ಮಾದಕದ್ರವ್ಯ ಹಾಗೂ ಮಾದಕ ವಸ್ತು ಸೇವನೆ ಮಾಡಲು ಉಪಯೋಗಿಸುವ ಸಾಧನ ಪತ್ತೆಯಾಗಿರುತ್ತದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!