ರಾಜ್ಯ

ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ



ಸಕಲೇಶಪುರ: ತಾಲ್ಲೂಕಿನ ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ‌ ಸಡಗರ ಸಂಭ್ರಮದಿಂದ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಮಸೀದಿ ಖತೀಬರಾದ ಬದ್ರುದ್ದಿನ್ ದಾರಿಮಿರವರ ನೇತೃತ್ವದಲ್ಲಿ  ಈದ್ ನಮಾಜ್ ನಂತರ ಕುತುಬ ಹಾಗೂ ಪ್ರಾರ್ಥನೆ ನಡೆಯಿತು.


ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ದಿನದಂದು ನಾವೆಲ್ಲರೂ ಎಲ್ಲಾ ದುಷ್ಟಚಟಗಳಿಂದ,ಎಲ್ಲಾ ‌ದ್ವೇಷ, ಅಸೂಯೆಗಳಿಂದ ದೂರವಿದ್ದು ಇಸ್ಲಾಂ ಧರ್ಮದ ತತ್ವ, ಆದರ್ಶದಂತೆ ಸಜ್ಜನರಾಗಿರೋಣ ಎಂದು ಖತೀಬರಾದ‌  ಬದ್ರುದ್ದಿನ್ ದಾರಿಮಿ ಈದ್ ಸಂದೇಶವನ್ನು ನೀಡಿದರು.

 


ಕಾರ್ಯಕ್ರಮದಲ್ಲಿ ಸದ್ರಿ ಮಸೀದಿಯಲ್ಲಿ ಹತ್ತು ವರ್ಷಗಳ ಕಾಲ ಖತೀಬರಾಗಿ ಮದರಸ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಿದ್ಯೆಯನ್ನು ಜಮಾಹತ್ ನ ಎಲ್ಲಾ ಹಿರಿಯ ಕಿರಿಯರಿಗೆ ಧಾರ್ಮಿಕ ಭೋದನೆಯ ಮೂಲಕ ಉತ್ತಮ ಸೇವೆ ನೀಡಿದ ಖತೀಬರಾದ ಬದ್ರುದ್ದಿನ್ ದಾರಿಮಿ ಉಸ್ತಾದ್ ರವರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು. ಜುಮ್ಮಾ ಮಸೀದಿಯ ಅದ್ಯಕ್ಷರು, ರಾಜ್ಯ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಸನ ಜಿಲ್ಲಾ ಕಾಂಗ್ರೆಸ್ ಪಕ್ಷದ ‌ವಕ್ತಾರರಾದ ಸಲೀಂ ಕೊಲ್ಲಹಳ್ಳಿ, ಮದರಸ‌ ಗುರುಗಳಾದ  ಸ್ವಾದೀಕ್ ಉಸ್ತಾದ್, ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಜಮಾಹತ್ ಸದಸ್ಯರು, ಯುವಕರು ಹಿರಿಯರು, ಕಿರಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!