ಕರಾವಳಿರಾಜಕೀಯ

ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ತಾಜುದ್ದೀನ್ ಸಾಲ್ಮರ, ಉಪಾಧ್ಯಕ್ಷರಾಗಿ ಶಮೀರ್ ನಾಜೂಕು, ಕಾರ್ಯದರ್ಶಿಯಾಗಿ ಇಫಾಝ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಫವಾಝ್ ಬನ್ನೂರು, ಕೋಶಾಧಿಕಾರಿಯಾಗಿ ಸಮೀರ್ ಡಿ.ಕೆ ಹಾಗೂ ಸಮಿತಿ ಸದಸ್ಯರಾಗಿ ರಿಯಾಝ್ ಭೂಮಿ, ಅಶ್ರಫ್ ಗೋಳಿಕಟ್ಟೆ, ರಫೀಕ್ ಬಲ್ನಾಡ್ ಹಾಗೂ ಅಲಿ ಸಾಲ್ಮರ  ಆಯ್ಕೆಯಾದರು.


 ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರುರವರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೀಕ್ ಪುತ್ತೂರುರವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಕಾರ್ಯದರ್ಶಿ ಉಸ್ಮಾನ್ ಎ.ಕೆ, ಇಸ್ಮಾಯಿಲ್ ಕೆಮ್ಮಾಯಿ ಹಾಗೂ ಜೊತೆ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!