ಕೇವಲ 29 ದಿನಗಳಲ್ಲಿ ಇಂಗ್ಲೀಷ್ ಕಲಿಯಿರಿ! ಸ್ಕಾಫೋಲ್ಡ್ ಅಕಾಡೆಮಿಯಲ್ಲಿ ದಾಖಲಾತಿ ಆರಂಭ
ಪುತ್ತೂರು: ಈಗಿನ ಕಾಲದಲ್ಲಿ ಎಲ್ಲದಕ್ಕೂ ಇಂಗ್ಲೀಷ್ ಅತ್ಯಗತ್ಯ. ಇಂಗ್ಲಿಷ್ ಮಾತನಾಡಬೇಕೆನ್ನುವುದು ಎಲ್ಲರ ಕನಸು ಕೂಡ ಆಗಿದೆ. ಅಂತಹ ಕನಸು ನನಸು ಮಾಡುವ ಸಲುವಾಗಿ ಕೇವಲ 29 ದಿವಸಗಳಲ್ಲಿ ಇಂಗ್ಲೀಷ್ ಕಲಿಯುವ ಸುವರ್ಣಾವಕಾಶವನ್ನು ಪುತ್ತೂರಿನ ಸ್ಕಾಫೋಲ್ಡ್ ಅಕಾಡೆಮಿ ಒದಗಿಸುತ್ತಿದೆ. ಬೊಳ್ವಾರು ಅಲ್ಮಾಸ್ ಟವರ್‌ನ 2ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಕಾಫೋಲ್ಡ್ ಅಕಾಡೆಮಿಯು ಪ್ರಸ್ತುತ ಸ್ಪೋಕನ್ ಇಂಗ್ಲೀಷ್‌ಗೆ ದಾಖಲಾತಿ ಪ್ರಾರಂಭಿಸಿದ್ದು ಈಗಾಗಲೇ ಹಲವಾರು ಮಂದಿ ದಾಖಲಾತಿಯನ್ನು ಮಾಡಿಕೊಂಡಿದ್ದಾರೆ.

ಸ್ಪೋಕನ್ ಇಂಗ್ಲೀಷ್ ಕಲಿಸಿಕೊಡುವವರು ವಿದೇಶಿ ಪರಿಣಿತ ಬೋಧಕರಾಗಿದ್ದು ಇದು ಇಂಗ್ಲೀಷ್ ಕಲಿಕೆಗೆ ಹೆಚ್ಚು ಪ್ರಯೋಜಕಾರಿಯಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು, ಹೀಗೆ ಯಾರು ಬೇಕಾದರೂ ಇಲ್ಲಿ ಪ್ರವೇಶ ಪಡೆಯಬಹುದಾಗಿದ್ದು ಕೇವಲ 29 ದಿನಗಳಲ್ಲಿ ಸುಲಲಿತವಾಗಿ ಇಂಗ್ಲೀಷ್ ಮಾತನಾಡಲು ಕಲಿಸಿಕೊಡಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಅಲ್ಲದೇ ಶಾಲಾ ವಿದ್ಯಾರ್ಥಿಗಳಿಗೆ ಶಿಘ್ರದಲ್ಲೇ ಟ್ಯೂಷನ್ ತರಗತಿಗಳೂ ಆರಂಭಗೊಳ್ಳಲಿದ್ದು ಹೆಚ್ಚಿನ ವಿವರಗಳಿಗೆ ಮೊ:7619308191 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.




