ಕರಾವಳಿಕ್ರೈಂ

ಗಾಂಜಾ ಮಾರಾಟಕ್ಕೆ ಯತ್ನ: ಯುವಕನ ಬಂಧನ



ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಕಾವೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.


ನಗರದ ಮೇರಿಹಿಲ್ ಹೆಲಿಪ್ಯಾಡ್ ಮೈದಾನದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಸ್ಕೂಟರ್ ಸಹಿತ ಸೊತ್ತು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

 

ಉಳ್ಳಾಲ ಮುಕ್ಕಚೇರಿಯ ಹಿಲರಿಯ ನಗರದ ಇರ್ಷಾದ್ ಯಾನೆ ಇರ್ಷಾ ಬಂಧಿತ ಆರೋಪಿ. ಈತನಿಂದ 1,56,000 ರೂ. ಮೌಲ್ಯದ 3.138 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.


ಆರೋಪಿಯ ವಿರುದ್ಧ ಈ ಹಿಂದೆ ಉಳ್ಳಾಲ ಮತ್ತು ಮಂಗಳೂರು ಸಿಎಸ್‌ಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!