ಪುತ್ತೂರು: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಾಮಫಲಕ ಅಳವಡಿಕೆ..!
ಪುತ್ತೂರು: ಖಾಲಿ ಬಿಯರ್ ಬಾಟಲಿ ಮತ್ತು ಕಸವನ್ನು ಗೋಣಿ ಚೀಲವೊಂದರಲ್ಲಿ ತುಂಬಿಸಿ ಅದನ್ನು ಬೆದ್ರಾಳ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಎಸೆದು ಹೋಗಿದ್ದು ಇದೀಗ ಅದೇ ಗೋಣಿ ಚೀಲ ಪಕ್ಕದಲ್ಲಿ ‘ಶ್ರದ್ದಾಂಜಲಿ’ ಅರ್ಪಿಸಿರುವ ಬರಹ ಕಂಡು ಬಂದಿದೆ.
ಬಾಟಲಿ ಮತ್ತು ಕಸ ತುಂಬಿದ ಗೋಣಿ ಚೀಲವನ್ನು ಎಸೆದು ಹೋಗಿರುವುದಕ್ಕೆ ಸ್ಥಳೀಯರು ಕೋಪಗೊಂಡಿದ್ದು ತ್ಯಾಜ್ಯ ಎಸೆದು ಹೋದ ಸ್ಥಳದಲ್ಲಿ ‘ಸತ್ತವರಿಗೆ ಶ್ರದ್ಧಾಂಜಲಿ’ ಎಂದು ಬರೆದು ಅಳವಡಿಸಿದ್ದಾರೆ. ಶ್ರದ್ಧಾಂಜಲಿ ಅರ್ಪಿಸಿರುವುದು ಹಾಸ್ಯದ ರೂಪದಲ್ಲಿ ಕಂಡು ಬಂದರೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಿದೆ.