ಕ್ರೈಂಜಿಲ್ಲೆ

ಬಂಟ್ವಾಳದ ಸಾವದ್ ಹತ್ಯೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬಂಟ್ವಾಳದ ಸಾವದ್ ಎಂಬವರನ್ನು ಹತ್ಯೆ ಮಾಡಿ ಮೂಡುಗೆರೆ ದೇವರಮನೆ ಸಮೀಪ ಗುಡ್ಡದಲ್ಲಿ ಮೃತದೇಹ
ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದಾವೂದ್ ಅಮೀರ್, ಅಬ್ದುಲ್ ರಹೀಜ್, ಬಂಟ್ವಾಳದ ಕಾವಲ ಮೂಡೂರು ಗ್ರಾಮದ ಆಫ್ರಿದಿ ಹಾಗೂ ಮಹಮ್ಮದ್ ಇರ್ಷಾದ್ ಎಂದು ತಿಳಿದು ಬಂದಿದೆ.
ಕೊಲೆಗೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬುವರನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ನಾಲ್ವರನ್ನು ಇದೀಗ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!