ಇಂಡೋನೇಷ್ಯಾ: ಎರಡು ರೈಲುಗಳ ನಡುವೆ ಭೀಕರ ಅಪಘಾತ 7 ಸಾವು; ಹಲವರಿಗೆ ಗಾಯ
ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿ, 81 ಮಂದಿ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಜಕಾರ್ತಾ ಹೊರವಲಯದಲ್ಲಿ ಸಂಭವಿಸಿದೆ.

ಜಕಾರ್ತಾ ಹೊರವಲಯದ ಬೆಕಾಸಿಯಲ್ಲಿ ಸೋಮವಾರ ತಡರಾತ್ರಿ ಪ್ರಯಾಣಿಕ ರೈಲು ಹಾಗೂ ಮತ್ತೊಂದು ರೈಲಿನ ನಡುವೆ ಢಿಕ್ಕಿ ಸಂಭವಿಸಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಟ್ಯಾಕ್ಸಿಯೊಂದು ಪ್ರಯಾಣಿಕರ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿಯಲ್ಲಿ ನಿಂತಿತ್ತು. ಇದೇ ವೇಳೆಗೆ ಮತ್ತೊಂದು ರೈಲು ಬಂದು ಪ್ರಯಾಣಿಕ ರೈಲಿನ ಮಹಿಳೆಯರ ಬೋಗಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ರೈಲಿನ ಬೋಗಿಗಳು ಜಖಂಗೊಂಡು 7 ಮಂದಿ ಮೃತಪಟ್ಟಿದ್ದಾರೆ. 81 ಮಂದಿಗೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.




