ಕರಾವಳಿ

ಶಾಸಕ ಅಶೋಕ್ ರೈ ಕಚೇರಿಯಲ್ಲಿ ಚಿಕ್ಕಿ ಬದಲು ಮಜ್ಜಿಗೆ ವಿತರಣೆ


ಪುತ್ತೂರು: ಬಿಸಿಲ ತಾಪಮಾನದ ನಡುವೆ ತನ್ನನ್ನು ಭೇಟಿಯಾಗಲು ಬಂದ ಸಾರ್ವಜನಿಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಕಚೇರಿಯಲ್ಲಿ ಚಿಕ್ಕಿ ಬದಲು ಮಜ್ಜಿಗೆ ವಿತರಿಸಲಾಯಿತು.


ಶಾಸಕರಾದ ಬಳಿಕ ತನ್ನ ಕಚೇರಿಯಲ್ಲಿ ವಾರದ ಪ್ರತೀ ಸೋಮವಾರ ಶಾಸಕರು ಭೇಟಿಗೆ ಬರುವ  ಸಾರ್ವಜನಿಕರಿಗೆ ಚಿಕ್ಕಿ ವಿತರಣೆ ಮಾಡುತ್ತಿದ್ದಾರೆ. ಆದರೆ ಎಪ್ರಿಲ್ ತಿಂಗಳಲ್ಲಿ ಬಿಸಿಲ ತಾಪಮಾನ ಅಧಿಕವಾಗಿರುವ ಕಾರಣ ಕಚೇರಿಗೆ ಬಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ ಮಾಡಿದ್ದಾರೆ.
ಮಜ್ಜಿಗೆಯ ಜೊತೆಗೆ ಇಂದು ಇಡ್ಲಿ ಸಾಂಬಾರ್, ವಡೆ, ಕೇಸರಿಬಾತ್, ಚಾ ಹಾಗೂ ಕಾಫಿ ವಿತರಣೆ ನಡೆಯಿತು‌.


ಈ ಬಗ್ಗೆ ಶಾಸಕರಲ್ಲಿ ಕೇಳಿದರೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಬಿಸಿಲ ಬೇಗೆಗೆ ದಾಹ ನೀಗಿಸುವ ಉದ್ದೇಶದಿಂದ ಮಜ್ಜಿಗೆ ನೀಡುತ್ತಿದ್ದೇನೆ, ಜೊತೆಗೆ ಇವತ್ತು ಸಣ್ಣ ಮಟ್ಟಿನ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.‌ ಹಸಿದವನಿಗೆ ಆಹಾರ ನೀಡುವುದು ಧರ್ಮ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!