ಕರಾವಳಿ

ಮದರಸ ಪಬ್ಲಿಕ್ ಪರೀಕ್ಷೆ: ಅರಿಯಡ್ಕ ಮಿಫ್ತಾಹುಲ್
ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ

ಪುತ್ತೂರು: ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ನಡೆಸಿದ 2024-25ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಅರಿಯಡ್ಕ ಮಿಫ್ತಾಹುಲ್ ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ ಮಾಡಿದೆ. 12ನೇ ತರಗತಿಯ ತಮೀಝ 300ರಲ್ಲಿ 297 ಅಂಕ ಹಾಗೂ ಶೈಮ 294 ಅಂಕ ಪಡೆದು ಟಾಪರ್ ಆಗಿದ್ದಾರೆ.

ಮುಹಮ್ಮದ್ ಆಫ್ರಾಹ್ ಮತ್ತು ರಝಿಯ ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಐದನೆ ತರಗತಿಯ ಫಾತಿಮಾ, ಶಾಝಿಲ್ ಹಾಗೂ ಮುಹಮ್ಮದ್ ತ್ವಾಹ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಉತ್ತಮ ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಅಧ್ಯಾಪಕರಾದ ಎ.ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಅವರಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಜಮಾಅತ್ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *

error: Content is protected !!