ಉಪ್ಪಿನಂಗಡಿ: ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಕರೆದ ಆರೋಪ, ಆರೋಪಿ ಪೊಲೀಸ್ ವಶಕ್ಕೆ
ಪುತ್ತೂರು: ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಕರೆದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ ದೂರುದಾರರ ಅಪ್ರಾಪ್ತ ಪ್ರಾಯದ ಸಹೋದರಿಯನ್ನು, ಆರೋಪಿ ಮುಹಮ್ಮದ್ ಮುಸ್ತಫಾ (40) ಎಂಬಾತ ಕಳೆದ ಎರಡು ತಿಂಗಳುಗಳಿಂದ ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದು, ಕಳೆದ ತಿಂಗಳ 29ನೇ ತಾರೀಕಿನಂದು ಬಾಲಕಿಯನ್ನು ಆರೋಪಿಯು ಆತನ ಮನೆಗೆ ಕರೆದಿರುತ್ತಾನೆ. ಈ ಬಗ್ಗೆ ಆಕೆ ತನ್ನ ಹೆತ್ತವರಿಗೆ ತಿಳಿಸಿದ್ದು, ದಿನಾಂಕ:02.12 2025 ರಂದು ಆರೋಪಿಯ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ:114/2025, ಕಲಂ:11(1)(4),12 POCSO and 78 BNS ರಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



